ಬೆಂಗಳೂರು, ಏ.10-ಮೋಜಿನ ಜೀವನಕ್ಕಾಗಿ ರಾತ್ರಿ ವೇಳೆಯಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರು ಮತ್ತು ವಾಹನ ಸವಾರರನ್ನು ಅಡ್ಡಗಟ್ಟಿ ಹಣ, ಮೊಬೈಲ್ ದರೋಡೆ ಮಾಡುತ್ತಿದ್ದ ಐವರು ದರೋಡೆಕೋರರನ್ನು ಬ್ಯಾಟರಾಯನಪುರ ಠಾಣೆ ಪೆÇಲೀಸರು ಬಂಧಿಸಿ ಮೂರು ಬೈಕ್ ಹಾಗೂ ಹಣ ವಶಪಡಿಸಿಕೊಂಡಿದ್ದಾರೆ.
ಮಲ್ಲತ್ತಹಳ್ಳಿಯ ಸತೀಶ (19), ಜ್ಞಾನಭಾರತಿಯ ಅಭಿಷೇಕ್(23), ಶಿವಕುಮಾರ್ (28), ವಿಜಯಕುಮಾರ್(19) ಮತ್ತು ಚಂದನ್ಕುಮಾರ್ (19) ಬಂಧಿತ ದರೋಡೆಕೋರರು.
ಕಳೆದ ಏ.3 ರಂದು ರಾತ್ರಿ 11 ಗಂಟೆಯಲ್ಲಿ ನವಾಜ್ ಅಹಮ್ಮದ್ ಮತ್ತು ಶಶಾಂಕ್ ಎಂಬುವರು ತಮ್ಮ ಸ್ಯಾಂಟ್ರೋ ಕಾರು ಮತ್ತು ಐ20 ಕಾರಿನಲ್ಲಿ ಮೈಸೂರು ರಸ್ತೆಯ ಆರ್.ಆರ್.ಆರ್ಚ್ ಬಳಿ ಹೋಗುತ್ತಿದ್ದಾಗ ನಾಲ್ಕು ಬೈಕ್ಗಳಲ್ಲಿ ಬಂದ ಏಳೆಂಟು ಮಂದಿ ದರೋಡೆಕೋರರು ಇವರಿಬ್ಬರ ಕಾರುಗಳನ್ನು ಅಡ್ಡಗಟ್ಟಿ ಕಲ್ಲಿನಿಂದ ಇವರ ತಲೆಗೆ ಹೊಡೆದು, ಕಾರಿನ ಗಾಜುಗಳನ್ನು ಜಖಂಗೊಳಿಸಿ 5 ಸಾವಿರ ಹಣ ಹಾಗೂ 35 ಸಾವಿರ ಬೆಲೆಬಾಳುವ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಬ್ಯಾಟರಾಯನಪುರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಐದು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಮದ್ಯಪಾನ, ಜೂಜು ಇನ್ನಿತರ ಶೋಕಿ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದು, ಮೋಜಿನ ಜೀವನ ಮಾಡುವ ಉದ್ದೇಶದಿಂದ ದರೋಡೆ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ 3,500ರೂ. ನಗದು, ಕೃತ್ಯಕ್ಕೆ ಬಳಸಿದ್ದ ರಾಯಲ್ ಎನ್ಫೀಲ್ಡ್ ಬೈಕ್, ಆ್ಯಕ್ಟೀವಾ ಹೊಂಡಾ, ಹೀರೋ ಹೊಂಡಾ, ಫ್ಯಾಷನ್ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ. ಪಶ್ಚಿಮ ವಿಭಾಗದ ಉಪಪೆÇಲೀಸ್ ಆಯುಕ್ತ ರವಿ ಡಿ.ಚನ್ನಣ್ಣನವರ್, ಸಹಾಯಕ ಪೆÇಲೀಸ್ ಆಯುಕ್ತ ಡಾ.ಎಸ್.ಪ್ರಕಾಶ್, ಇನ್ಸ್ಪೆಕ್ಟರ್ ಟಿ.ಪಿ.ಶಿವಸ್ವಾಮಿ ಅವರನ್ನೊಳಗೊಂಡ ತಂಡ ಕಾರ್ಯಾಚರಣೆಯನ್ನು ನಡೆಸಿ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.