ನಗರದ ಟರ್ಫ್ ಕ್ಲಬ್‍ನಲ್ಲಿ ನಡೆಯುವ ಕುದುರೆ ರೇಸ್‍ನಲ್ಲಿನ ಕ್ವೀನ್ ಲತೀಫಾ ಎಂಬ ಕುದುರೆಗೆ ಉದ್ದೀಪನ ಮದ್ದು ನ್ಯಾಯಾಲಯಕ್ಕೆ ಚಾರ್ಜ್‍ಶೀಟ್

ಬೆಂಗಳೂರು, ಏ.10-ನಗರದ ಟರ್ಫ್ ಕ್ಲಬ್‍ನಲ್ಲಿ ನಡೆಯುವ ಕುದುರೆ ರೇಸ್‍ನಲ್ಲಿನ ಕ್ವೀನ್ ಲತೀಫಾ ಎಂಬ ಕುದುರೆಗೆ ಉದ್ದೀಪನ ಮದ್ದು ನೀಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕ್ಲಬ್‍ನ ಸಿಇಒ ಸೇರಿದಂತೆ ಆರು ಮಂದಿ ವಿರುದ್ಧ ಸಿಐಡಿ ಪೆÇಲೀಸ್ ತಂಡ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದೆ.
ಸಿಐಡಿಯ ಡಿವೈಎಸ್ಪಿ ನಂಜುಂಡೇಗೌಡ ಅವರನ್ನೊಳಗೊಂಡ ತಂಡ ಈ ಬಗ್ಗೆ ತನಿಖೆ ನಡೆಸಿ 1300 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಟರ್ಫ್ ಕ್ಲಬ್‍ನ ಸಿಇಒ ನಿರ್ಮಲ್‍ಪ್ರಸಾದ್, ಸಿಎಸ್‍ಒ ಪ್ರದ್ಯೂಮ್ನಸಿಂಗ್, ಕ್ವೀನ್ ಲತೀಫಾ ಕುದುರೆ ಪಾಲಕ ವಿವೇಕ್ ಉಭಯ್‍ಕರ್, ಸಹ ಮಾಲೀಕ ಅರ್ಜುನ್ ಸಜನಾನಿ, ಕುದುರೆ ತರಬೇತುದಾರ ನೀಲ್ ದರಾಶಾಹ್ ಮತ್ತು ಮಹೇಶ್ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ.
ಇವರೆಲ್ಲರ ಒಳಸಂಚಿನಿಂದ 2017ರ ಮಾ.5ರ ಬೆಂಗಳೂರು ರೇಸ್‍ನಲ್ಲಿ 2ನೇ ಸ್ಥಾನ ಪಡೆದ ಕುದುರೆ ಮಿನಿವರ್ ರೋಸ್ ಮೇಲೆ ಬಾಜಿ ಕಟ್ಟಿದ್ದ ಸುಮಾರು 73,053 ಟಿಕೆಟ್‍ದಾರರಿಗೆ ಸುಮಾರು 7.30 ಲಕ್ಷ ವಂಚನೆಯಾಗಿದೆ.

ಅಂದಿನ ಬೆಂಗಳೂರು ರೇಸ್‍ನಲ್ಲಿ ಹೆಚ್ಚಿನ ಕಾರ್ಯಕ್ಷಮತೆಯಿಂದ ದಾಖಲೆ ಸಮಯದಲ್ಲಿ ಗೆದ್ದ ಕಾರಣ ಊಟಿ ರೇಸ್‍ನಲ್ಲೂ ಸಹ ಗೆಲ್ಲುತ್ತದೆ ಎಂದು ನಂಬಿ ಬಾಜಿದಾರರು ಈ ಕುದುರೆ ಮೇಲೆ ಬಾಜಿ ಕಟ್ಟಿದ್ದರು.
2017, ಏ.14ರಂದು ಊಟಿಯಲ್ಲಿ ಕ್ವೀನ್ ಲತೀಫಾ ಕುದುರೆಯು ಮೊದಲ ಸ್ಥಾನ ಪಡೆಯುತ್ತದೆ ಎಂದು ಆಫ್‍ಲೈನ್ ಮತ್ತು ಆನ್‍ಲೈನ್ ಬಾಜಿಯಲ್ಲಿ 40,613 ಟಿಕೆಟ್‍ದಾರರು 4.6 ಲಕ್ಷ ರೂ. ಹಣ ಮತ್ತು ಇದೇ ಕುದುರೆಯು ಎರಡನೇ ಸ್ಥಾನ ಗಳಿಸುತ್ತದೆ ಎಂದು ಬಾಜಿ ಕಟ್ಟಿದ್ದ 32,013 ಬಾಜಿದಾರರು 3.20 ಲಕ್ಷ ರೂ. ಬಾಜಿ ಕಟ್ಟಿದ್ದ ಇವರೆಲ್ಲರಿಗೂ ವಂಚನೆಯಾಗಿದೆ.

ಕುದುರೆ ಕ್ವೀನ್ ಲತೀಫಾಗೆ ಉದ್ದೀಪನ ಮದ್ದು ನೀಡಲಾಗಿದೆ ಎಂಬ ದೂರಿನನ್ವಯ ಪ್ರೀವೆನ್ಷನ್ ಆಫ್ ಕ್ರೂಲಿಟಿ ಟು ಅನಿಮಲ್ಸ್ ಆಕ್ಟ್-1960ರಡಿ ಪ್ರಕರಣ ದಾಖಲಾಯಿತು.ನಂತರ ತನಿಖೆ ಕೈಗೊಂಡಿದ್ದ ಸಿಐಡಿ ಪೆÇಲೀಸರು ಹಲವಾರು ಮಾಹಿತಿ ಸಂಗ್ರಹಿಸಿ ಕುದುರೆಯ ಮೂತ್ರವನ್ನು ಪರೀಕ್ಷೆಗೆ ಕಳುಹಿಸಿದ್ದರು.
ಈ ವರದಿಯಲ್ಲಿ ಉದ್ದೀಪನ ಮದ್ದು ನೀಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಟರ್ಫ್ ಕ್ಲಬ್‍ನ ಆರು ಮಂದಿ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.
ನಿರ್ಮಲ್‍ಪ್ರಸಾದ್ ಟರ್ಫ್ ಕ್ಲಬ್‍ನಲ್ಲಿ ಕಾರ್ಯದರ್ಶಿಯಾಗಿ ನೌಕರಿಯಲ್ಲಿದ್ದು, 2016ರಲ್ಲಿ ವಯೋನಿವೃತ್ತಿ ಹೊಂದಿದ ನಂತರ ಕ್ಲಬ್‍ನಲ್ಲಿ ಸಿಇಒ ಆಗಿ ಒಂದು ವರ್ಷದ ಅವಧಿಗೆ ನೇಮಕ ಮಾಡುವಲ್ಲಿ ಸ್ಟೀವರ್ಡ್ ಆದ ವಿವೇಕ್ ಉಭಯ್‍ಕರ್ ಮುಖ್ಯ ಕಾರಣಕರ್ತರಾಗಿರುತ್ತಾರೆ.

ವಿವೇಕ್ ಉಭಯ್‍ಕರ್ ಅವರ ಜೊತೆ ಒಳಸಂಚು ನಡೆಸಿ ಇವರ ಆಪ್ತ ಸ್ನೇಹಿತ ಅರ್ಜುನ್ ಸಜನಾನಿ ಅವರ ಸಹ ಮಾಲೀಕತ್ವದ ಕ್ವೀನ್ ಲತೀಫಾ ಕುದುರೆ ರೇಸ್‍ನಲ್ಲಿ ಗೆದ್ದಿತ್ತು.

ಈ ಕುದುರೆ ಮೂತ್ರದಲ್ಲಿ ಪೆÇ್ರಕೇನ್ ಅಂಶ ಪಾಸಿಟಿವ್ ಎಂದು ಪರೀಕ್ಷಾ ವರದಿಯಲ್ಲಿ ಬಂದಿದ್ದರೂ ಸಹ ಈ ವಿಚಾರವನ್ನು ಚೇರ್‍ಮೆನ್ ಅವರ ಗಮನಕ್ಕೆ ತರದೆ ನಿಯಮಾನುಸಾರ ಕುದುರೆ ಲಾಯದ ಪರಿವೀಕ್ಷಣೆ ಕ್ರಮ ಜರುಗಿಸದೆ ಮತ್ತು ಕುದುರೆಯನ್ನು ಅಮಾನತುಪಡಿಸದೆ ಕ್ವೀನ್ ಲತೀಫಾ ಕುದುರೆಯು ನೈಜವಾಗಿ ತನ್ನ ಕಾರ್ಯಕ್ಷಮತೆಯ ಮೇಲೆ ಗೆಲುವು ಸಾಧಿಸದೆ ಉದ್ದೀಪನ ಪೆÇ್ರಕೇನ್ ಅಂಶದಿಂದ 2017, ಮಾ.5ರ ಬಿಟಿಸಿ ರೇಸ್‍ನಲ್ಲಿ ಗೆಲುವು ಸಾಧಿಸಿದ್ದು, ಇದರಿಂದ 2 ಮತ್ತು 3ನೇ ಕುದುರೆ ಮೇಲೆ ಬೆಟ್ಟಿಂಗ್ ಮಾಡಿದ್ದ ಮುಗ್ಧ ಜನರಿಗೆ ಮೋಸವಾಗಿದೆ ಎಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ