
ಚನ್ನರಾಯಪಟ್ಟಣ, ಏ.10-ಶ್ರವಣಬೆಳಗೂಳ ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿಯ ಅಭ್ಯರ್ಥಿ ನಾನೇ ಎಂದು ಹೇಳುತ್ತಿದ್ದ ಹಾಲಿ ತಾಲ್ಲೂಕು ಅಧ್ಯಕ್ಷ ಶಿವನಂಜೇಗೌಡರಿಗೆ ಮತ್ತೊಬ್ಬ ಪ್ರತಿಸ್ಪರ್ಧಿ ಟಿಕೆಟ್ಗಾಗಿ ಕರಸತ್ತು ನಡೆಸುತ್ತಿದ್ದಾರೆ.
ಇದೇ ತಾಲ್ಲೂಕಿನ ಹಿರಿಸಾವೆ ಹೋಬಳಿಯ ಅಂತನಹಳ್ಳಿ ಗ್ರಾಮದ ಕೆಂಪೇಗೌಡ ಎ.ಎಸ್ ಎಂಬುವವರು ಶ್ರವಣಬೆಳಗೂಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲೂ ತೀವ್ರ ಕಸರತ್ತು ನಡೆಸಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆಯಿದ್ದು ರಾಜ್ಯದಲ್ಲಿ ಈ ಬಾರಿ ಪಕ್ಷ ಅಧಿಕಾರ ಹಿಡಿಯಲಿದ್ದು ಅದೇ ರೀತಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆಗೊಂಡರೆ ಭಾರತದ ಪ್ರಧಾನಿಯಾದ ನರೇಂದ್ರ ಮೋದಿಯವರ ಕೈ ಬಲಪಡಿಸಿದಂತಾಗುತ್ತದೆ. ಶ್ರವಣಬೆಳಗೂಳ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಇನ್ನೂ ಒಂದು ವಾರದಲ್ಲಿ ಗೊತ್ತಾಗಲಿದೆ, ವರಿಷ್ಠರು ತಮಗೆ ಟಿಕೇಟ್ ನೀಡುವ ಬಗ್ಗೆ ಬರವಸೆ ನೀಡಿದ್ದು ಅತೀ ಶೀಘ್ರವಾಗಿ ಕ್ಷೇತ್ರದಲ್ಲಿ ಪ್ರಚಾರದ ಕಾರ್ಯ ಶುರು ಮಾಡಲಾಗುತ್ತದೆ ಎಂದರು.
ಈ ಬೆಳವಣಿಗೆಯಿಂದ ಕ್ಷೇತ್ರದಲ್ಲಿ ತಾನೇ ಬಿಜೆಪಿ ಅಭ್ಯರ್ಥಿ ಎಂದು ಸ್ವಯಂ ಬಿಂಬಿಸಿಕೊಂಡಿದ್ದ ಶಿವನಂಜೇಗೌಡರ ಕಥೆಯೇನು ಎಂಬುದು ಇನ್ನೂ ನಿಗೂಢವಾಗಿದೆ.