ಬೆಂಗಳೂರು,ಏ.10- ತಳಸ್ತರದವರ ಅಭಿವೃದ್ದಿಗಾಗಿ ದುಡಿದವರನ್ನು ಗುರುತಿಸಿ ಬೆಂಬಲಿಸುವ ಸಲುವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್ ಬೋಧಿವೃಕ್ಷ- ಬೋಧ ವರ್ಧನ ಪ್ರಶಸ್ತಿಗಳನ್ನು ನೀಡುತ್ತಿದೆ.
ಟ್ರಸ್ಟ್ ವತಿಯಿಂದ ಏ.14ರ ಅಂಬೇಡ್ಕರ್ ಜಯಂತಿಯಂದು ನಡೆಸುವ ಅಂಬೇಡ್ಕರ್ ಹಬ್ಬದ ಅಂಗವಾಗಿ ತಳಸ್ತರದವರ ಏಳಿಗಾಗಿ ದುಡಿದವರನ್ನು ಗೌರವಿಸಲಾಗುತ್ತಿದ್ದು, ಅಖಿಲ ಭಾರತೀಯ ಮಟ್ಟದ ಈ ಪ್ರಶಸ್ತಿಗಳನ್ನು ಆಯ್ಕೆ ಮಾಡುವುದಕ್ಕೆ ಯಾವುದೇ ಅರ್ಜಿಗಳನ್ನು ಆಹ್ವಾನಿಸುವುದಿಲ್ಲ. ಸ್ಪೂರ್ತಿಧಾಮ ರಚಿಸುವ ಸಮಿತಿಯು ಈ ಪ್ರಶಸ್ತಿಗೆ ಅರ್ಹರಾದವರನ್ನು ಆಯ್ಕೆ ಮಾಡುತ್ತದೆ .
ಬೋಧಿ ವೃಕ್ಷ ಪ್ರಶಸ್ತಿಗೆ ಒಂದು ಲಕ್ಷ ನಗದು, ಪ್ರಶಸ್ತಿ ಫಲಕ ಹಾಗೂ ಬೋಧಿವರ್ಧನ ಪ್ರಶಸ್ತಿಗೆ ತಲಾ ಇಪ್ಪತ್ತು ಸಾವಿರ ರೂ. ಹಾಗೂ ಫಲಕ ನೀಡಲಾಗುತ್ತದೆ ಎಂದು ಸ್ಪೂರ್ತಿಧಾಮದ ಅಧ್ಯಕ್ಷ ಎಸ್.ಮರಿಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.