ಟ್ರಕ್ಕೊಂದು ಉರುಳಿ ಕರ್ನಾಟಕದ ವಿಜಾಪುರ ಜಿಲ್ಲೆಯ 18 ಕಾರ್ಮಿಕರು ಸ್ಥಳದಲ್ಲೇ ಮೃತ

ಮುಂಬೈ, ಏ.10-ಅತಿವೇಗವಾಗಿ ಚಲಿಸುತ್ತಿದ್ದ ಟ್ರಕ್ಕೊಂದು ಉರುಳಿ ಕರ್ನಾಟಕದ ವಿಜಾಪುರ ಜಿಲ್ಲೆಯ 18 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, ಇತರ 20 ಮಂದಿ ತೀವ್ರ ಗಾಯಗೊಂಡ ದುರಂತ ಇಂದು ಮುಂಜಾನೆ ಪಶ್ಚಿಮ ಮಹಾರಾಷ್ಟ್ರದ ಸತರಾ ಜಿಲ್ಲೆಯಲ್ಲಿ ಸಂಭವಿಸಿದೆ.

ವಿಜಾಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಮದನಬಾವಿ ಗ್ರಾಮದ ಕೂಲಿ ಕಾರ್ಮಿಕರನ್ನು ಪುಣೆಗೆ ಒಯ್ಯುತ್ತಿದ್ದ ಟ್ರಕ್ ಮುಂಬೈ-ಬೆಂಗಳೂರು ಹೆದ್ದಾರಿಯ ಖಂಡಾಲ ಬಳಿ ಇಂದು ಮುಂಜಾನೆ 4.30ರಲ್ಲಿ ಉರುಳಿ ಬಿತ್ತು. ಈ ಭೀಕರ ಅಪಘಾತದಲ್ಲಿ 18 ಮಂದಿ ಸ್ಥಳದಲ್ಲೇ ಮೃತಪಟ್ಟು, 20 ಕಾರ್ಮಿಕರು ಗಂಭೀರವಾಗಿ ಗಾಯಗೊಂಡರು ಎಂದು ಸತರಾ ಪೆÇಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಅಪಘಾತಗಳಿಂದ ಕುಖ್ಯಾತಿ ಪಡೆದಿರುವ ಖಂಬಟ್ಕಿ ಘಾಟ್ ಬಳಿ ಅತಿವೇಗದ ಟ್ರಕ್ ಚಾಲಕನ ನಿಯಂತ್ರಣ ತಡೆಗೋಡೆಗೆ ಅಪ್ಪಳಿಸಿ ಉರುಳಿ ಬಿತ್ತು ಎಂದು ಅವರು ಹೇಳಿದ್ದಾರೆ.

ತಿಕೋಟಾ ತಾಲ್ಲೂಕಿನ ಮದನಬಾವಿಯ ಗ್ರಾಮಸ್ಥರು ಉದ್ಯೋಗ ಅರಸಿ ಮಹಾರಾಷ್ಟ್ರಕ್ಕೆ(ಪುಣೆಗೆ) ಗುಳೆ ಹೋಗುತ್ತಿದ್ದಾಗ ಘೋರ ದುರಂತ ಸಂಭವಿಸಿದ್ದು ಶ್ರಮಿಕ ವರ್ಗದ ಬದುಕು ದುರಂತದಲ್ಲಿ ಕೊನೆಗೊಂಡಿದೆ.

ಅಪಘಾತ ಸುದ್ದಿ ತಿಳಿದ ಕೂಡಲೇ ಖಂಡಾಲ ಪೆÇಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ದೀರ್ಘ ಸಮಯ ಚಾಲನೆ ಟ್ರಕ್ ಚಾಲನೆ ಮಾಡಿದ ಚಾಲಕ ಒಂದು ಕೆಲವು ಕ್ಷಣ ತೂಕಡಿಸಿದ್ದರಿಂದ ವಾಹನದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಪೆÇಲೀಸರು ತಿಳಿಸಿದ್ದಾರೆ.

ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಖಂಡಾಲ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ