ಗೋಲ್ಡ್ ಕೋಸ್ಟ್, ಏ.10-ಆಸ್ಟ್ರೇಲಿಯಾದ ಗೋಲ್ಸ್ ಕೋಸ್ಟ್‍ನಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಪಟುಗಳು ಅಥ್ಲೆಟಿಕ್ಸ್‍ನಲ್ಲೂ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ.
ಅಚ್ಚರಿ ಫಲಿತಾಂಶದಲ್ಲಿ ಭಾರತದ ಮಹಮದ್ ಅಸನ್ 400 ಮೀಟರ್ ಓಟ ಸ್ಪರ್ಧೆಯ ಫೈನಲ್ ಪ್ರವೇಶಿಸಿದ್ದಾರೆ.
ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಕಾ ಸಿಂಗ್ 1958ರಲ್ಲಿ ಈ ಸಾಧನೆ ಮಾಡಿದ್ದರು.
ಭಾರತದ ಭರವಸೆಯ ಅಥ್ಲೆಟ್ ಅಯ್ಯಸ್ವಾಮಿ ಧರುನ್ 400 ಮೀಟರ್ ಹರ್ಡಲ್ಸ್‍ನಲ್ಲಿ ಫೈನಲ್ ಪ್ರವೇಶಿಸಲು ವಿಫಲರಾಗಿ ನಿರಾಸೆ ಮೂಡಿಸಿದರು.