ರಾಂಚಿ, ಏ.10-ಪಿಕಪ್ ವಾಹನವೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಮದುವೆ ದಿಬ್ಬಣದ ಎಂಟು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿರುವ ಭೀಕರ ಘಟನೆ ಜಾರ್ಖಂಡ್‍ನ ಸಿಮ್‍ದೇಗಾದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.
ಗಾಯಗೊಂಡ ಎಂಟು ಜನರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಕಾಮ್‍ದಾರ ಗುಮ್ಲಾ ಗ್ರಾಮದಿಂದ ಸಿಮ್‍ದೇಗಾಗೆ ವಾಹನ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಧರ್ಮ ಕೊಲೆಬಿರಾ ಪೆÇಲೀಸ್ ಠಾಣೆ ಸಮೀಪ ಅತಿವೇಗದ ಮಿನಿಬಸ್ ಸೇತುವೆಗೆ ಬಡಿದು ಈ ದುರಂತ ಸಂಭವಿಸಿ ಸ್ಥಳದಲ್ಲೇ ಎಂಟು ಮಂದಿ ಮೃತಪಟ್ಟರೆಂದು ಪೆÇಲೀಸ್ ಅಧಿಕಾರಿ ಅಮಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಗಾಯಾಳುಗಳನ್ನು ಸಿಮ್‍ದೇಗಾದಲ್ಲಿನ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.