ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತಕ್ಕೆ ಮತ್ತೊಂದು ಚಿನ್ನ: ಮಹಿಳೆಯರ ಶೂಟಿಂಗ್ ಸ್ಪರ್ಧೆಯಲ್ಲಿ ಸ್ವರ್ಣ ಗೆದ್ದ ಹೀನಾ ಸಿಧು

ಗೋಲ್ಡ್ ಕೋಸ್ಟ್‌‌‌:ಏ-೧೦: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್‌ವೆಲ್ತ್‌ ಗೇಮ್ಸ್‌‌‌ನಲ್ಲಿ ಭಾರತದ ಚಿನ್ನದ ಬೇಟೆ ಮುಂದುವರೆದಿದ್ದು, ಇಂದು ಭಾರತಕ್ಕೆ ಮತ್ತೊಂದು ಸ್ವರ್ಣ ಪದಕ ಸಿಕ್ಕಿದೆ.

ಮಹಿಳೆಯರ 25 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಹೀನಾ ಸಿಂಧು ಚಿನ್ನದ ಬದಕ ಬಾಚಿದ್ದಾರೆ. ಪ್ರಿಸೆಷನ್ ಮತ್ತು ರ್ಯಾಪಿಡ್ ಹಂತದಗಳಲ್ಲಿ ತಲಾ 286 ಮತ್ತು 293 ಅಂಕಗಳಿಸಿದ ಹೀನಾ ಸಿಂಧು ಒಟ್ಟು 579 ಅಂಕಗಳಿಸುವ ಮೂಲಕ ಅಗ್ರ ಸ್ಥಾನಕ್ಕೇರಿದರು. ಅಂತಿಮ ಹಂತದಲ್ಲಿ ದಾಖಲೆಯ 38 ಅಂಕಗಳಿಸಿ ಚಿನ್ನದ ಪದಕಕ್ಕೆ ಭಾಜನರಾದರು. ಹೀನಾ ಸಿಂಧುಗೆ ಇದು 2ನೇ ಕಾಮನ್ ವೆಲ್ತ್ ಪದಕವಾಗಿದೆ.

ಇದರೊಂದಿಗೆ ಭಾರತ 11 ಚಿನ್ನ, 4 ಬೆಳ್ಳಿ ಹಾಗೂ 5 ಕಂಚಿನ ಪದಕ ಗೆದ್ದಿದ್ದು, ಪದಕಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

CWG, Heena Sidhu, adds third gold to India’s shooting kitty

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ