ಕ್ಷಿಪಣಿ ದಾಳಿಯಲ್ಲಿ ತನ್ನ ಪಾತ್ರವಿಲ್ಲ – ಅಮೆರಿಕ

ಡಮಾಸ್ಕಸ್, ಏ.9-ಸಿರಿಯಾ ವಾಯುನೆಲೆಯೊಂದರ ಮೇಲೆ ನಡೆದ ಕ್ಷಿಪಣಿ ದಾಳಿಯೊಂದರಲ್ಲಿ ಹಲವರು ಮೃತಪಟ್ಟಿ, ಅನೇಕರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.  ಘೆËಟಾದಲ್ಲಿ ನಡೆದ ಇಸ್ಲಾಂ ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ರಾಸಾಯನಿಕ ದಾಳಿಗೆ ಮಕ್ಕಳು ಮತ್ತು ಮಹಿಳೆಯರೂ ಸೇರಿದಂತೆ 70ಕ್ಕೂ ಹೆಚ್ಚು ಮಂದಿ ಮೊನ್ನೆ ಬಲಿಯಾದ ಬೆನ್ನಲ್ಲೇ ಕ್ಷಿಪಣಿ ಆಕ್ರಮಣ ನಡೆದಿದೆ. ಆದರೆ ಕ್ಷಿಪಣಿ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಉಗ್ರರ ಪ್ರಾಬಲ್ಯವಿರುವ ಡಮಾಸ್ಕಸ್‍ನಲ್ಲಿ ಈ ಹಿಂದೆ ನಡೆದ ಶಂಕಿತ ರಾಸಾಯನಿಕ ದಾಳಿಯಲ್ಲಿ ಸಾವು-ನೋವು ಸಂಭವಿಸಿದ ನಂತರ ಅಮೆರಿಕ ಯುದ್ದ ವಿಮಾನಗಳು ವಾಯು ನೆಲೆ ಮೇಲೆ ಮಿಂಚಿನ ದಾಳಿ ನಡೆಸಿ ವಿಮಾನಗಳನ್ನು ಧ್ವಂಸಗೊಳಿಸಿತ್ತು. ಈ ದಾಳಿಯಲ್ಲಿ ಸಿರಿಯಾದ ಕೆಲವು ಯೋಧರು ಮೃತಪಟ್ಟಿದ್ದರು.
ಈಗ ಮತ್ತೆ ವಿಮಾನನಿಲ್ದಾಣಕ್ಕೆ ಹೊಂದಿಕೊಂಡಿರುವ ಟೈಫುರ್ ವಾಯು ನೆಲೆ ಮೇಲೆ ಕ್ಷಿಪಣಿ ದಾಳಿಯಿಂದ ಹಲವು ಮಂದಿ ಮೃತಪಟ್ಟಿರುವುದರಿಂದ ಅಮೆರಿಕ ಮೇಲೆ ಅನುಮಾನದ ಮುಳ್ಳು ನೆಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ