ನಾಳೆಯಿಂದ ಮೇ 10ರವರೆಗೆ 34ನೇ ಬೇಸಿಗೆ ತರಬೇತಿ ಶಿಬಿರ

ಬೆಂಗಳೂರು,ಏ.9-ವೈಎಂಸಿಎ ಸಂಸ್ಥೆ ವತಿಯಿಂದ 34ನೇ ಬೇಸಿಗೆ ತರಬೇತಿ ಶಿಬಿರವನ್ನು ನಾಳೆಯಿಂದ ಮೇ 10ರವರೆಗೆ ನೃಪತುಂಗ ರಸ್ತೆಯಲ್ಲಿರುವ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಬೆನ್ನಿ ಅಗಸ್ತಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿಬಿರದ ಉದ್ಘಾಟನೆಯನ್ನು ರೈಲ್ವೇಸ್ ರಣಜಿ ಟ್ರೋಫಿ ಕ್ಯಾಪ್ಟನ್ ಯರ್ರೇ ಗೌಡ ನೆರವೇರಿಸಲಿದ್ದು, ಸಂಸ್ಥೆಯ ಉಪಾಧ್ಯಕ್ಷರಾದ ಡಾ.ದಿಲೀಪ್ ಲೂಯಿಸ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಶಿಬಿರದಲ್ಲಿ ಕ್ರಿಕೆಟ್, ಬಾಡ್ಮಿಂಟನ್, ವಾಲಿಬಾಲ್, ಫುಟ್ಬಾಲ್, ಬಾಸ್ಕೆಟ್ ಬಾಲ್, ಕಬ್ಬಡಿ, ಕಂಪ್ಯೂಟರ್ ಕೋರ್ಸ್, ಚಿತ್ರಕಲೆ, ಕ್ಲಾಸಿಕಲ್ ಡ್ಯಾನ್ಸ್ , ಕರಾಟೆ ಮುಂತಾದ ತರಬೇತಿಗಳನ್ನು ನೀಡಲಾಗುವುದು.

ತರಬೇತಿಯಲ್ಲಿ ಪಾಲ್ಗೊಳ್ಳುವವರಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸುವವರಿಗೆ ಟೀಶರ್ಟ್ ವಿತರಿಸಿ, ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುವುದು. ಆಸಕ್ತಿಯುಳ್ಳ ವಿದ್ಯಾರ್ಥಿಗಳು 9844041573/8710950990 ಸಂಪರ್ಕಿಸಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ