ಏರ್ ಪಿಸ್ತೂಲ್‍ನಲ್ಲಿ ಜೀತು ರೈಗೆ ಸ್ವರ್ಣ ಪದಕ :

ಗೋಲ್ಡ್‍ಕೋಸ್ಟ್ ,ಏ.9- ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 21ನೆ ಕಾಮನ್‍ವೆಲ್ತ್‍ನ 10 ಮೀಟರ್ ಏರ್ ಪಿಸ್ತೂಲ್‍ನಲ್ಲಿ ಜೀತು ರೈ ಸ್ವರ್ಣ ಪದಕ ಗೆಲ್ಲುವ ಮೂಲಕ ಭಾರತ ಪಾಯಿಂಟ್ಸ್ ಪಟ್ಟಿಯಲ್ಲಿ 3ನೆ ಸ್ಥಾನಕ್ಕೇರಿದೆ. ನಿನ್ನೆ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್‍ನಲ್ಲಿ ಭಾರತದವರೇ ಆದ ಮನುಬಾಕರ್ ಚಿನ್ನದ ಪದಕ ಗಳಿಸಿದರೆ, ಪುರುಷರ ವಿಭಾಗದಲ್ಲೂ ಜೀತು ರೈ ರಜತ ಪದಕ ಗಳಿಸಿರುವುದು ಕೂಡ ದಾಖಲೆಯೇ ಆಗಿದೆ. ಇಂದು ನಡೆದ ಪುರುಷರ ಏರ್‍ರೈಫಲ್‍ನಲ್ಲಿ ಜೀತುರೈ ಸ್ವರ್ಣ ಪದಕವನ್ನು ಕೊರಳಿಗೆ ಧರಿಸಿಕೊಂಡರೆ, ಓಂ ಪ್ರಕಾಶ್ ಮಿತರ್‍ವಾಲ್ (214.3 ಪಾಯಿಂಟ್ಸ್) ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಆಸ್ಟ್ರೇಲಿಯಾದ ಕೆರ್ರಿ ಬೆಲ್ (233.5 ಪಾಯಿಂಟ್ಸ್) ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು.
ಜೀತು ದಾಖಲೆ:
ಇತ್ತೀಚೆಗೆ ನಡೆದ ವಿಶ್ವ ಚಾಂಪಿಯನ್‍ಷಿಪ್‍ನಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದ ಜೀತು , ಇಂದು ತಮ್ಮ ಗುರಿಯನ್ನು ಮತ್ತಷ್ಟು ನಿಖರವಾಗಿಸಿಕೊಂಡು 235.1 ಪಾಯಿಂಟ್ಸ್‍ಗಳನ್ನು ಕಲೆ ಹಾಕುವ ಮೂಲಕ ಚಿನ್ನದ ಪದಕ ಗೆದ್ದು ನೂತನ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ