ಕಾಮನ್ವೆಲ್ತ್ ನಲ್ಲಿ ಮುಂದುವರಿದ ಪದಕ ಬೇಟೆ: ಶೂಟಿಂಗ್ ನಲ್ಲಿ ಭಾರತಕ್ಕೆ ಒಂದು ಚಿನ್ನ, ಒಂದು ಕಂಚು

ಗೋಲ್ಡ್ ಕೋಸ್ಟ್,ಏ.9

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟಗಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಶೂಟಿಂಗ್ ನಲ್ಲಿ ಎರಡು ಪದಕಗಳು ಲಭಿಸಿದೆ.

ಸೋಮವಾರ ನಡೆದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಶೂಟರ್ ಜೀತು ರಾಯ್ ಅಗ್ರ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಅಲ್ಲದೆ ದಾಖಲೆ ಅಂಕಗಳಿಸುವ ಮೂಲಕ ಜೀತುರಾಯ್ ಅಗ್ರಸ್ಥಾನ ಗಳಿಸಿದ್ದು, ರಾಯ್ ಫೈನಲ್ ನಲ್ಲಿ ಒಟ್ಟು 235.1 ಅಂಕಗಳಿಸಿ ಚಿನ್ನ ಗೆದಿದ್ದಾರೆ. 233.5 ಅಂಕಗಳಿಸಿದ ಆಸ್ಟ್ರೇಲಿಯಾದ ಕೆರ್ರಿ ಬೆಲ್ ಬೆಳ್ಳಿ ಪದಕ ಪಡೆದರು.

ಇದೇ ಪಂದ್ಯದಲ್ಲಿ ಭಾರತದ ಮತ್ತೋರ್ವ ಶೂಟರ್  ಓಂ ಮಿಥಾರ್ವಾಲ್ ಅವರು 214.3 ಅಂಕಗಳಿಸುವ ಮೂಲಕ ಭಾರತಕ್ಕೆ ಮತ್ತೊಂದು ಕಂಚಿನ ಪದಕ ತಂದುಕೊಟ್ಟಿದ್ದಾರೆ. 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ