ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬೆಂಗಳೂರು,ಏ.9- ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಮುಂದಾಗಿರುವ ಬಿಜೆಪಿ ವಿಧಾನಸಭೆ ಚುನಾವಣೆಗೆ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಳೆದ ರಾತ್ರಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಸಂಸದೀಯ ಮಂಡಳಿಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ 72ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಮೊದಲ ಪಟ್ಟಿಯಲ್ಲಿ ವಿರಾಜಪೇಟೆಯ ಹಾಲಿ ಶಾಸಕ ಕೆ.ಜಿ.ಬೋಪಯ್ಯ ಹೊರತುಪಡಿಸಿದರೆ ಬಹುತೇಕ ಎಲ್ಲ ಶಾಸಕರಿಗೂ ಟಿಕೆಟ್ ಸಿಕ್ಕಿದೆ. ಹಾಲಿ ಶಾಸಕರ ಪೈಕಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ , ಬಳ್ಳಾರಿ ಸಂಸದ ರಾಮುಲು ಅವರಿಗೂ ಟಿಕೆಟ್ ಘೋಷಿಸಲಾಗಿದೆ.
ವಿಧಾನಪರಿಷತ್ ಸದಸ್ಯರ ಪೈಕಿ ಪ್ರತಿ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಇತ್ತೀಚೆಗೆಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್, ವಿ.ಸೋಮಣ್ಣ ಅವರಿಗೂ ಮೊದಲ ಪಟ್ಟಿಯಲ್ಲೇ ಟಿಕೆಟ್ ಸಿಕ್ಕಿದೆ.

ಇನ್ನು 72 ಅಭ್ಯರ್ಥಿಗಳ ಪೈಕಿ ಮೂರು ಕ್ಷೇತ್ರಗಳಿಗೆ ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಕಾರಾವಾರದಿಂದ ರೂಪಾಲಿ ನಾಯಕ್, ಹಿರಿಯೂರಿನಿಂದ ಪೂರ್ಣಿಮಾ ಶ್ರೀನಿವಾಸ್, ನಿಪ್ಪಾಣಿಯಿಂದ ಶಶಿಕಾಂತ್ ಜೊಲ್ಲೆಗೂ ಟಿಕೆಟ್ ನೀಡಲಾಗಿದೆ.

ಹಾಲಿ ಶಾಸಕರ ಪೈಕಿ ಕೆಜಿಎಫ್‍ನ ವೈ.ರಾಮಕ್ಕ ಬದಲು ಅವರ ಪುತ್ರ ಸಂಪಂಗಿಗೆ ಟಿಕೆಟ್ ಧಕ್ಕಿದೆ. ಈ ಹಿಂದೆ ಶಾಸಕರ ಸದನದಲ್ಲೆ ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್‍ಗೆ ಸಿಕ್ಕಿಬಿದ್ದು ಜೈಲು ಪಾಲಾಗಿದ್ದರು. ಆದ್ದರಿಂದಲೇ 2013ರ ವಿಧಾನಸಭೆ ಚುನಾವಣೆಯಲ್ಲಿ ಸಂಪಂಗಿಗೆ ಕೆಜಿಎಫ್‍ನಿಂದ ಟಿಕೆಟ್ ನಿರಾಕರಿಸಲಾಗಿತ್ತು.

ಚುನಾವಣೆಗೂ ಮುನ್ನವೇ ರಾಜ್ಯದ ಗಮನಸೆಳೆದಿದ್ದ ಶಿವಮೊಗ್ಗ ನಗರದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಳಲ್ಪಟ್ಟಿದ್ದ ಕೆ.ಎಸ್.ಈಶ್ವರಪ್ಪ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ವಿರಾಜ್‍ಪೇಟೆಯಿಂದ ಹಾಲಿ ಶಾಸಕ ಹಾಗೂ ವಿಧಾನಸಭೆಯ ಮಾಜಿ ಸ್ಪೀಕರ್, ಕೆ.ಜಿ.ಬೋಪಯ್ಯಗೆ ಟಿಕೆಟ್ ನೀಡದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಮೂಲಗಳ ಪ್ರಕಾರ ವಿರಾಜಪೇಟೆಯಿಂದ ಈ ಬಾರಿ ಗೋಪಾಲಯ್ಯ ಬದಲಿಗೆ ಸ್ಥಳೀಯರೊಬ್ಬರಿಗೆ ಟಕೆಟ್ ನೀಡಲು ಆರ್‍ಎಸ್‍ಎಸ್ ತೀರ್ಮಾನಿಸಿದೆ.
ಉಳಿದಂತೆ ಮೊದಲ ಪಟ್ಟಿಯಲ್ಲಿ ಗೆಲ್ಲುವ ಕುದುರೆಗಳಿಗೆ ಆದ್ಯತೆ ನೀಡಲಾಗಿದೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಈ ಕೆಳಕೆಂಡಂತಿದೆ.

1. ನಿಪ್ಪಾಣಿ – ಶಶಿಕಲಾ ಜೊಲ್ಲೆ
2. ಅಥಣಿ – ಲಕ್ಷ್ಮಣ ಸವದಿ
3. ಕಾಗವಾಡ – ಪರಮಗೌಡ ಎಚ್ ಕಾಗೆ
4. ಕುಡಚಿ – ಪಿ. ರಾಜೀವ್
5. ರಾಯಬಾಗ – ದುರ್ಯೋಧನ ಐಹೋಳೆ
6. ಹುಕ್ಕೇರಿ – ಉಮೇಶ್ ಕತ್ತಿ
7. ಅರಬಾವಿ -ಬಾಲಚಂದ್ರ ಜಾರಕಿಹೊಳಿ
8. ಬೆಳಗಾವಿ ಗ್ರಾಮಾಂತರ – ಸಂಜಯ್ ಪಾಟೀಲ್
9. ಬೈಲಹೊಂಗಲ – ಡಾ. ವಿಶ್ವನಾಥ್ ಪಾಟೀಲ್
10. ಸವದತ್ತಿ – ಆನಂದ್ ವಿಶ್ವನಾಥ್ ಮಹಾಮುನಿ
11. ಮುಧೋಳ – ಗೋವಿಂದ ಕಾರಜೋಳ
12. ಮುದ್ದೇಬಿಹಾಳ – ಎ..ಎಸ್. ಪಾಟೀಲ್ ನಡಹಳ್ಳಿ
13. ಬಿಜಾಪುರ ನಗರ – ಬಸವನಗೌಡ ಪಾಟೀಲ್ ಯತ್ನಾಳ್
14. ಬಬಲೇಶ್ವರ – ವಿಜುಗೌಡ ಪಾಟೀಲ್
15. ಸಿಂಧಗಿ -ರಮೇಶ್ ಬೂಸನೂರು
16. ಅಫ್ಜಲ್ ಪುರ – ಮಾಲೀಕಯ್ಯ ಗುತ್ತೇದಾರ್
17. ಸುರಪುರ – ನರಸಿಂಹ ನಾಯ್ಕ್
18. ಶಹಾಪುರ – ಗುರುಪಾಟೀಲ್ ಶಿರವಾಳ
19. ಗುಲ್ಬರ್ಗ ದಕ್ಷಿಣ – ದತ್ತಾತ್ರೇಯ ಪಾಟೀಲ್ ರೇವೂರ
20. ಆಳಂದ – ಸುಭಾಶ್ ಗುತ್ತೇದಾರ್
21. ಬಸವಕಲ್ಯಾಣ – ಮಲ್ಲಿಕಾರ್ಜುನ ಖೂಬಾ
22. ಔರಾದ್ – ಪ್ರಭು ಚೌಹಾಣ್
23. ರಾಯಚೂರು ಗ್ರಾಮಾಂತರ – ತಿಪ್ಪರಾಜು ಹವಾಲ್ದಾರ್
24. ರಾಯಚೂರು – ಡಾ. ಶಿವರಾಜ್ ಪಾಟೀಲ್
25. ದೇವದುರ್ಗ – ಶಿವನಗೌಡ ನಾಯಕ್
26. ಲಿಂಗಸುಗೂರು – ಮಾನಪ್ಪ ವಜ್ಜಲ್
27. ಕುಷ್ಟಗಿ – ದೊಡ್ಡನಗೌಡ ಪಾಟೀಲ್
28. ಧಾರವಾಡ – ಅಮೃತ್ ದೇಸಾಯ
29.ಹುಬ್ಬಳ್ಳಿ-ಧಾರವಾಡ ಕೇಂದ್ರ – ಜಗಧೀಶ್ ಶೆಟ್ಟರ್
30. ಹುಬ್ಬಳ್ಳಿ-ಧಾರವಾಡ ಪಶ್ಚಿಮ – ಅರವಿಂದ್ ಬೆಲ್ಲದ್
31. ಕಾರವಾರ – ರೂಪಾಲಿ ನಾಯಕ್
32. ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ
33. ಹಾನಗಲ್ – ಸಿ.ಎಂ. ಉದಾಸಿ
34. ಶಿಗ್ಗಾವಿ – ಬಸವರಾಜ ಬೊಮ್ಮಾಯಿ
35. ಹಿರೇಕೆರೂರು – ಯು.ಬಿ. ಬಣಕಾರ್
36.ವಿಜಯನಗರ – ಗವಿಯಪ್ಪ
37. ಕಂಪ್ಲಿ – ಟಿ.ಎಚ್. ಸುರೇಶ್ ಬಾಬು
38. ಸಂಡೂರು – ಬಿ. ರಾಘವೇಂದ್ರ
39. ಮೊಳಕಾಲ್ಮೂರು – ಬಿ. ಶ್ರೀರಾಮುಲು
40 ಚಿತ್ರದುರ್ಗ – ಜಿ.ಎಚ್. ತಿಪ್ಪಾರೆಡ್ಡಿ
41. ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
42. ಹೊಸದುರ್ಗ – ಗೂಳಿಹಟ್ಟಿ ಶೇಖರ್
43. ದಾವಣಗೆರೆ ಉತ್ತರ – ಎಸ್.ಎ. ರವೀಂದ್ರನಾಥ್
44. ಶಿವಮೊಗ್ಗ – ಕೆ.ಎಸ್. ಈಶ್ವರಪ್ಪ
45. ಶಿಕಾರಿಪುರ – ಯಡಿಯೂರಪ್ಪ
46. ಕುಂದಾಪುರ – ಹಾಲಾಡಿ ಶ್ರೀನಿವಾಸಶೆಟ್ಟಿ
47. ಕಾರ್ಕಳ – ವಿ. ಸುನಿಲ್ ಕುಮಾರ್
48. ಶೃಂಗೇರಿ – ಡಿ.ಎನ್. ಜೀವರಾಜ್
49. ಚಿಕ್ಕಮಗಳೂರು – ಸಿ.ಟಿ. ರವಿ
50. ತುಮಕೂರು ಗ್ರಾಮಾಂತರ – ಬಿ. ಸುರೆಶ್ ಗೌಡ
51. ಕೆಜಿಎಫ್ – ವೈ. ಸಂಪಂಗಿ
52. ಯಲಹಂಕ – ಎಸ್.ಆರ್. ವಿಶ್ವನಾಥ್
53. ರಾಜರಾಜೇಶ್ವರಿನಗರ – ಪಿ.ಎಂ. ಮುನಿರಾಜುಗೌಡ
54. ದಾಸರಹಳ್ಳಿ – ಎಸ್. ಮುನಿರಾಜು
55. ಮಲ್ಲೇಶ್ವರಂ – ಡಾ. ಸಿ.ಎನ್. ಅಶ್ವತ್ಥ್ ನಾರಾಯಣ
56. ಹೆಬ್ಬಾಳ-ಡಾ. ವೈ.ಎ. ನಾರಾಯಣಸ್ವಾಮಿ
57. ಸಿ.ವಿ. ರಾಮನ್ ನಗರ – ಎಸ್. ರಘು
58. ರಾಜಾಜಿನಗರ – ಎಸ್. ಸುರೇಶ್ ಕುಮಾರ್
59. ಗೋವಿಂದರಾಜನಗರ – ವಿ.ಸೋಮಣ್ಣ
60. ಚಿಕ್ಕಪೇಟೆ – ಉದಯ್ ಗರುಡಾಚಾರ್
61. ಬಸವನಗುಡಿ – ರವಿ ಸುಬ್ರಹ್ಮಣ್ಯ
62. ಪದ್ಮನಾಭನಗರ – ಆರ್. ಅಶೋಕ್
63. ಜಯನಗರ – ಬಿ.ಎನ್. ವಿಜಯ್ ಕುಮಾರ್
64. ಮಹದೇವಪುರ – ಅರವಿಂದ ಲಿಂಬಾವಳಿ
65. ಬೊಮ್ಮನಹಳ್ಳಿ – ಸತೀಶ್ ರೆಡ್ಡಿ
66. ಬೆಂಗಳೂರು ದಕ್ಷಿಣ – ಎಂ. ಕೃಷ್ಣಪ್ಪ
67. ಆನೇಕಲ್ – ಎ. ನಾರಾಯಣಸ್ವಾಮಿ
68. ಹೊಸಕೋಟೆ – ಶರತ್ ಬಚ್ಚೇಗೌಡ
69. ಚನ್ನಪಟ್ಟಣ – ಸಿ.ಪಿ. ಯೋಗೀಶ್ವರ್ ¾
70. ಶ್ರೀರಂಗಪಟ್ಟಣ – ನಂಜುಂಡೇ ಗೌಡ
71. ಸುಳ್ಯ – ಎಸ್. ಅಂಗಾರ
72. ಮಡಿಕೇರಿ – ಅಪ್ಪಚ್ಚು ರಂಜನ್
ಯಾವ ಸಮುದಾಯಕ್ಕೆ ಎಷ್ಟೆಷ್ಟು:
ಲಿಂಗಾಯಿತ -21
ಹಿಂದುಳಿದ-19
ಒಕ್ಕಲಿಗ -10
ಪರಿಶಿಷ್ಟ ಜಾತಿ-10
ಪರಿಶಿಷ್ಟ ವರ್ಗ -06
ಬ್ರಾಹ್ಮಣ -05
ಕೊಡವ-01

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ