![images (2)](http://kannada.vartamitra.com/wp-content/uploads/2018/04/images-2-5-678x380.jpg)
ಗೋಲ್ಡ್ಕೋಸ್ಟ್, ಏ.8- ಏರ್ಪಿಸ್ತೂಲ್ನಲ್ಲಿ ಮನುಬಾಕರ್ ಭಾರತಕ್ಕೆ ಸ್ವರ್ಣ ಪದಕ ತಂದುಕೊಡುವ ವೇಟ್ಲಿಫ್ಟಿಂಗ್ ಹೊರತುಪಡಿಸಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅಥ್ಲೀಟ್ ಆಗಿ ಬಿಂಬಿತಗೊಂಡರು.
ಬೆಲ್ಮೋಂಟ್ ಶೂಟಿಂಗ್ ಕೇಂದ್ರದಲ್ಲಿಂದು ನಡೆದ ಏರ್ಪಿಸ್ತೂಲ್ನಲ್ಲಿ ಹರಿಯಾಣದ ಮನು ಬಾಕರ್ ಉತ್ತಮ ಗುರಿ ಪ್ರದರ್ಶನ ತೋರುವ ಮೂಲಕ ಒಟ್ಟು 240.9 ಅಂಕಗಳೊಂದಿಗೆ ಚಿನ್ನದ ಪದಕ ಬೇಟೆಯಾಡಿದ್ದಾರೆ.
ಕಳೆದ ವರ್ಷದ ನಡೆದ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ಸ್ನಲ್ಲಿ ಚಿನ್ನ ಗೆದ್ದ ಅತ್ಯಂತ ಕಿರಿಯ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದ ಮನು ಬಾಕರ್ ಇಲ್ಲೂ ಕೂಡ ರಜತ ಪದಕ ಗೆಲ್ಲುವ ಮೂಲಕ ತಮ್ಮ ಮುಡಿಗೆ ಎರಡನೇ ಚಿನ್ನದ ಪದಕವನ್ನು ಏರಿಸಿಕೊಂಡಿದ್ದಾರೆ.
ಹೀನಾ ಸಿಂಧುಗೆ ಕಠಿಣ ಸವಾಲು:
ಮನುಬಾಕರ್ ಚಿನ್ನದ ಪದಕ ಗುರಿಯಿಟ್ಟರೆ ಹೀನಾ ಬೆಳ್ಳಿ ಪದಕವನ್ನು ಗೆದ್ದು ಮಿಂಚಿದರಾದರೂ ಅದು ಅವರು ಅವರಿಗೆ ಬಲು ಸುಲಭದ ಗುರಿಯಾಗಿರಲಿಲ್ಲ.
ಮೊದಲ ಸುತ್ತಿನಲ್ಲಿ ಹೀನಾ 6ನೆ ಸ್ಥಳಕ್ಕೆ ಕುಸಿದು ಎಲಿಮಿನೇಟರ್ ಆಗುವ ಅಪಾಯಕ್ಕೆ ಸಿಲುಕಿದ್ದರಾದರ ಸಿಂಧು ತೋರಿದ ಸಾಮಥ್ರ್ಯದಿಂದಾಗಿ ಎಲಿಮಿನೇಷನ್ನಿಂದ ಪಾರಾದರು.
ಅಂತಿಮ ಸುತ್ತಿನಲ್ಲಿ ಆಸ್ಟ್ರೇಲಿಯಾದ ಅಥ್ಲೀಟ್ಳ ಪ್ರಬಲ ಪೈಪೆÇೀಟಿಯ ನಡುವೆಯೂ ಸಿಂಧು ಒಟ್ಟು 234 ಅಂಕಗಳನ್ನು ಪಡೆಯುವುದರೊಂದಿಗೆ ಬೆಳ್ಳಿ ಪದಕವನ್ನು ಜಯಿಸಿದರು.
ಆಸ್ಟ್ರೇಲಿಯಾದ ಅಲಿನಾ ಗಲಿಯಾಬೊವಿಟಿಚ್ 214.9 ಅಂಕಗಳೊಂದಿಗೆ ಕಂಚಿನ ಪದಕ ಪಡೆದು ಸ್ಥಳೀಯ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದರು.
ರವಿಕುಮಾರ್ಗೆ ಕಂಚು:
ಪುರುಷರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ರವಿಕುಮಾರ್ ಕಂಚಿನ ಪದಕವನ್ನು ಪಡೆಯುವ ಮೂಲಕ ಪದಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ರವಿಕುಮಾರ್ ಒಟ್ಟು 224.1 ಅಂಕಗಳನ್ನು ಪಡೆಯುವ ಮೂಲಕ ಕಂಚಿನ ಪದಕ ಜಯಿಸಿದರೆ, ಆಸ್ಟ್ರೇಲಿಯಾದ ಡಾನೆ ಸ್ಯಾಂಪ್ಸೋನ್ ಹಾಗೂ ಬಾಂಗ್ಲಾದೇಶದ ವ ಅಬ್ದುಲ್ಲಾ ಹೆಲ್ ಬಾಕಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕವನ್ನು ಗೆದ್ದು ಸಂಭ್ರಮಿಸಿದರು.