ಕಾಮನ್‍ವೆಲ್ತ್‍ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆಯರು ಫೈನಲ್ಸ್‍ಗೆ:

ಗೋಲ್ಡ್‍ಕೋಸ್ಟ್, ಏ.8- ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯುತ್ತಿರುವ 21 ನೆ ಕಾಮನ್‍ವೆಲ್ತ್‍ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆಯರು ಫೈನಲ್ಸ್‍ಗೆ ಲಗ್ಗೆ ಇಟ್ಟಿದ್ದು ಚಿನಡ್ನದ ಪದಕ ಗೆಲ್ಲುವತ್ತ ಗುರಿ ನೆಟ್ಟಿದ್ದಾರೆ.
ವಿಶ್ವದ ನಂಬರ್ 2 ನೆ ಶ್ರೇಯಾಂಕಿತ ಕಿಡಂಬಿ ಶ್ರೀಕಾಂತ್ ಹಾಗೂ ಲಂಡನ್‍ನಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಸೈನಾ ನೆಹ್ವಾಲ್ ಬಳಗವು ಸಿಂಗಾಪುರ್ ತಂಡದ ಆಟಗಾರರ ವಿರುದ್ಧ 3-1ಯಿಂದ ಜಯಿಸುವ ಮೂಲಕ ಫೈನಲ್ಸ್ ಪ್ರವೇಶಿಸಿದ್ದಾರೆ.
ಮಿಕ್ಸ್ಡ್ ಡಬಲ್ಸ್‍ನಲ್ಲಿ ಸತ್ವಿಕ್ ಮತ್ತು ಅಶ್ವಿನಿ, ಸಿಂಗಾಪುರದ ಆಟಗಾರರಾದ ಯಾಂಗ್ ಕೈ ಟೆರಿ ಹಿ ಮತ್ತು ಜಿಯಾ ಹಿಂಗ್ ಕ್ರಿಸ್ಟಲ್ ವೋಂಗ್‍ರ ತೀವ್ರ ಪೈಪೆÇೀಟಿಯ ನಡುವೆಯೂ 22-20, 21-18 ನೇರ ಸೆಟ್‍ಗಳಿಂದ ಜಯಸಿದರು.
ಭಾರತದ ಭರವಸೆಯ ಆಟಗಾರ ಶ್ರೀಕಾಂತ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಿಂಗಾಪುರದ ಕೆನ್ ವಿರುದ್ಧ 37 ನಿಮಿಷಗಳ ಕಾಲ ಸೆಣಸಿ 21-17, 21-14ರಿಂದ ಗೆಲುವು ಕಂಡರು
ಪುರುಷರ ಮಿಕ್ಸ್ಡ್ ಡಬಲ್ಸ್‍ನಲ್ಲಿ ಭಾರತ ಸತ್ವಿಕ್ ಹಾಗೂ ಚಿರಾಗ್ ಮೊದಲ ಸುತ್ತಿನಲ್ಲಿ 21-17 ರಿಂದ ಗೆಲುವು ಕಂಡರೂ ಕೂಡ ನಂತರ ಸುತ್ತಿನಲ್ಲಿ 9-21, 12-21 ಸೆಟ್‍ಗಳಿಂದ ಹ್ಯಾಂಗ್ ಕೈ ಟೆರ್ರಿ ಹಿ ಮತ್ತು ಡ್ಯಾನಿ ಬಾವಾ ಕ್ರಿಸ್ಟಿಯಾನಾರಿಗೆ ಶರಣಾದರು
ಭಾರತದ ಬ್ಯಾಡ್ಮಿಂಟನ್ ತಾರೆಯರು ನಾಳೆ ನಡೆಯುವ ಫೈನಲ್ಸ್‍ನಲ್ಲಿ ಇಂಗ್ಲೆಂಡ್ ಹಾಗೂ ಮಲೇಷಿಯಾ ಆಟಗಾರರ ಸವಾಲನ್ನು ಎದುರಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ