ಭಾರತ ಹಾಕಿ ವನಿತೆಯರು ಪ್ರಶಸ್ತಿಯ ಸುತ್ತಿಗೆ ಲಗ್ಗೆ !

ಗೋಲ್ಡ್‍ಕೋಸ್ಟ್, ಏ.8- ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 21ನೆ ಕಾಮನ್‍ವೆಲ್ತ್‍ನ ಆರಂಭಿಕ ಪಂದ್ಯದಲ್ಲೇ ವೇಲ್ಸ್ ವಿರುದ್ಧ ವಿರೋಚಿತ ಸೋಲು ಕಂಡಿದ್ದ ಭಾರತ ಹಾಕಿ ವನಿತೆಯರು ಮಲೇಷ್ಯಾ ಹಾಗೂ ಇಂಗ್ಲೆಂಡ್ ವಿರುದ್ಧ ಜಯಸಿ ಪ್ರಶಸ್ತಿಯ ಸುತ್ತಿಗೆ ಲಗ್ಗೆ ಇಡುವ ವಿಶ್ವಾಸವನ್ನು ತೋರ್ಪಡಿಸಿದ್ದಾರೆ. ಇಂದಿಲ್ಲಿ ನಡೆದ ಗ್ರೂಪ್ ಎ ವಿಭಾಗದಲ್ಲಿ ಸ್ಥಾನ ಪಡೆದಿರುವ ಭಾರತ ವನಿತೆಯರು ಇಂಗ್ಲೆಂಡ್‍ನ ವನಿತೆಯರ ಸವಾಲನ್ನು ಸ್ವೀಕರಿಸಿದರು.
ಆರಂಭಿಕ ನಿಮಿಷದಲ್ಲೇ ಇಂಗ್ಲೆಂಡ್‍ನ ನಾಯಕಿ ಅಲ್ಸೆಂಗಾಡರ್ ಡ್ಯಾನ್‍ಸನ್ ಅವರು ಗೋಲು ಬಾರಿಸುವ ಮೂಲಕ ಗೆಲುವಿನ ಹುಮ್ಮಸ್ಸು ತೋರಿಸಿದರು ಆದರೆ 42 ನಿಮಿಷದಲ್ಲಿ ನವನೀತ್ ಕೌರ್ ಹಾಗೂ 48ನೆ ನಿಮಿಷದಲ್ಲಿ ಗುರ್‍ಜಿತ್ ಕೌರ್ ಗಳಿಸಿದ ಗೋಲುಗಳ ಸಹಾಯದಿಂದ ಭಾರತ ತಂಡವು 2-1 ರಿಂದ ಗೆಲುವು ಸಾಧಿಸಿ ಟೂರ್ನಿಯಲ್ಲಿ 2ನೆ ಜಯ ಗಳಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ