ಮೇಘಾಲಯದಲ್ಲಿ ಸಚಿವರ ಪುತ್ರನೊಬ್ಬ ಚಾಲನೆ ಮಾಡುತ್ತಿದ್ದ ಕಾರೊಂದಕ್ಕೆ ಪೆÇಲೀಸ್ ಪೇದೆಯೊಬ್ಬರು ಬಲಿ:

ಶಿಲ್ಲಾಂಗ್, ಏ.8-ಮಂತ್ರಿಮಹೋದಯರ ಪುತ್ರರ ಬೇಜವಾಬ್ದಾರಿ ವರ್ತನೆಗಳಿಂದ ಅನಾಹುತ ಪ್ರಕರಣಗಳು ವರದಿಯಾಗುತ್ತಿರುವಾಗಲೇ ಈಶಾನ್ಯ ರಾಜ್ಯ ಮೇಘಾಲಯದಲ್ಲಿ ಸಚಿವರ ಪುತ್ರನೊಬ್ಬ ಚಾಲನೆ ಮಾಡುತ್ತಿದ್ದ ಕಾರೊಂದಕ್ಕೆ ಪೆÇಲೀಸ್ ಪೇದೆಯೊಬ್ಬರು ಬಲಿಯಾಗಿದ್ದಾರೆ.
ಆರೋಗ್ಯ ಸಚಿವ ಅಲೆಗ್ಸಾಂಡರ್ ಹೆಕ್ ಅವರ ಪುತ್ರ ಐಬಸ್ಯ ರಾಯ್ ಚಾಲನೆ ಮಾಡುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಪೆÇಲೀಸ್ ಪೇದೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಾಗೃಹ ಅಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಪೆÇಬ್ರತ್ ಆರ್. ಮರಕ್ ಮೃತ ಪೆÇಲೀಸ್ ಕಾನ್ಸ್‍ಟೆಬಲ್. ಬೈಕ್ ಚಾಲನೆ ಮಾಡುತ್ತಿದ್ದ ಜೈಲು ಅಧಿಕಾರಿ ಪೆÇ್ರಬಿನ್ ಡಿ. ಸಂಗ್ಮಾ ಅವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಘಟನೆಯನ್ನು ದುರದೃಷ್ಟಕರ ಎಂದು ಹೇಳಿರುವ ಸಚಿವರು, ಈ ಬಗ್ಗೆ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಯಲಿ ಎಂದು ಹೇಳಿದ್ದಾರೆ.  ಚಿಕಿತ್ಸೆ ಪಡೆಯುತ್ತಿರುವ ಜೈಲು ಅಧಿಕಾರಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ನಂತರ ಅವರ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ