ಕಾಮನ್‍ವೆಲ್ತ್ ಗೇಮ್ಸ್: ಮುಂದುವರಿದ ಭಾರತದ ಪದಕ ಬೇಟೆ, 4 ದಿನ ಚಿನ್ನಕ್ಕೆ ಮುತ್ತಿಟ್ಟ ಪೂನಮ್ ಯಾದವ್

ಗೋಲ್ಡ್ ಕೋಸ್ಟ್,ಏ.8

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಡೆಯುತ್ತಿದ್ದು, ನಾಲ್ಕನೇಯ ದಿನವೂ ಭಾರತಕ್ಕೆ ಚಿನ್ನದ ಪದಕ ಲಭಿಸಿದೆ.

ವೇಟ್ ಲಿಫ್ಟಿಂಗ್ ಮಹಿಳೆಯರ 69 ಕೆಜಿ ವಿಭಾಗದಲ್ಲಿ ಭಾರತದ ಪೂನಮ್ ಯಾದವ್(22) ಅವರು ಒಟ್ಟು 222 ಕೆ.ಜಿ ಭಾರ ಎತ್ತುವ ಮೂಲಕ ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಇದರಂತೆಯೇ ಶೂಟಿಂಗ್ ವಿಭಾಗದಲ್ಲಿ ಮನು ಭಾಕೇರ್(ಚಿನ್ನ), ಹೀನ ಸಿಧು ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಒಟ್ಟಿನಲ್ಲಿ ಈವರೆಗೆ 6 ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಭಾರತಕ್ಕೆ ಒಲಿದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ