ನವದೆಹಲಿ,ಏ.8- ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸುಧಾರಣೆ ಆಗಬೇಕೆಂದು ಮತ್ತೆ ಧನಿ ಎತ್ತಿರುವ ಸುಪ್ರೀಂಕೋರ್ಟ್ ಹಿರಿಯ ನ್ಯಾಯಾಧೀಶರಾದ ಜೆ.ಚಲಮೇಶ್ವರ್, ನ್ಯಾ.ರಂಜಯ್ ಗೊಗೊಯ್ ಭಾರತದ ಮುಖ್ಯ ನ್ಯಾಯಮೂರ್ತಿಯಾಗಬೇಕೆಂದು ಹೇಳಿದ್ದಾರೆ.
ಹಾರ್ವರ್ಡ್ ಬ್ಲಾಕ್ ಆಪ್ ಇಂಡಿಯಾ ದೆಹಲಿಯಲ್ಲಿ ಏರ್ಪಡಿಸಿದ್ದ ಪ್ರಜಾಪ್ರಭುತ್ವ ಪಾತ್ರ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೆಲವು ವಿರೋಧ ಪಕ್ಷಗಳು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ವಾಗ್ದಂಡನೆಗಾಗಿ ಪ್ರಸ್ತಾಪ ಮುಂದಿಟ್ಟಿವೆ. ಆದರೆ, ಇದರಿಂದ ಸಮಸ್ಯೆ ಇತ್ಯರ್ಥವಾಗುವುದಿಲ್ಲ ಎಂದರು.
ದೇಶದ ಅತ್ಯುನ್ನತ ನ್ಯಾಯಸಂಸ್ಥೆಯಾದ ಸುಪ್ರೀಂಕೋರ್ಟ್ ಪುನಾರಚನೆ ಬಗ್ಗೆ ಸೂಕ್ತ ಚರ್ಚೆಯಾಗಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು ಎಂದು ಅವರು ಹೇಳಿದರು.