ಜಿದ್ದಾ, ಏ.7-ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಧುರೀಣರಾದ ಯು.ಟಿ. ಖಾದರ್ ಮತ್ತು ಮೊಯುದ್ದೀನ್ ಬಾವಾ ಅವರು ಸೌದಿ ಅರೇಬಿಯಾದ ಜಿದ್ದಾದಲ್ಲೂ ಮತ ಬೇಟೆಯಲ್ಲಿ ತೊಡಗಿ ಹುಬ್ಬೇರಿಸುವಂತೆ ಮಾಡಿದ್ದಾರೆ.
ಕರಾವಳಿ ಪ್ರದೇಶದ ಅನೇಕ ಮಂದಿ ಜಿದ್ದಾ ಸೇರಿದಂತೆ ಸೌದಿ ಅರೇಬಿಯಾದ ವಿವಿಧ ನಗರಗಳಲ್ಲಿ ಉದ್ಯೋಗದಲ್ಲಿರಿದ್ದಾರೆ. ಅವರು ತಾಯ್ನಾಡಿಗೆ ಹಿಂದಿರುಗಿ ಅಥವಾ ಅಲ್ಲಿಂದಲೇ ಅಂಚೆ ಮತ ಹಾಕಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಸಚಿವ ಯು.ಟಿ. ಖಾದರ್ ಮತ್ತು ಕಾಂಗ್ರೆಸ್ನ ಮತ್ತೊಬ್ಬ ನಾಯಕ ಮೊಯಿದ್ದೀನ್ ಬಾವಾ ಕರಾವಳಿ ಭಾಗದ ಜನರನ್ನು ಒಲೈಸಿ ಮತ ಸೆಳೆಯಲು ಯತ್ನ ನಡೆಸಿದ್ದಾರೆ.