ಬೆಂಗಳೂರು,ಏ.7- ಉತ್ತರ ಅಮೆರಿಕಾದ ವೀರಶೈವ ಸಮಾಜದ 41ನೇ ಅಂತಾರಾಷ್ಟ್ರೀಯ ಸಮಾವೇಶವು ಜೂನ್ 29-30ರಂದು ಮಿಚಿಗನ್ನ ಟೆಟ್ರಾಯಿಡ್ನಲ್ಲಿ ನಡೆಯಲಿದೆ ಎಂದು ವೀರಶೈವ ಸಮಾಜದ ಅಧ್ಯಕ್ಷ ತುಮಕೂರು ದಯಾನಂದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ರಾಜ್ಯದ ಬಹುತೇಕ ಎಲ್ಲಾ ಮಠಗಳ ಮಠಾಧೀಶರು ಭಾಗವಹಿಸಲಿದ್ದು , ಪ್ರಮುಖವಾಗಿ ಈ ಬಾರಿ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಮತ್ತು ಯೋಗಗುರು ವಚನಾನಂದ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವಾಸುತ್ತಿದ್ದರೂ ಸಹ ನಮ್ಮ ಆಚಾರ ವಿಚಾರಗಳನ್ನು ಬಿಡದೆ ಪಾಡಿಸಿಕೊಂಡು ಬರಬೇಕು ಎನ್ನುವ ಸಂದೇಶ ನೀಡುವುದು ಸಮಾವೇಶದ ಮೂಲ ಉದ್ದೇಶ ಎಂದರು.
ಕಾರ್ಯಕ್ರಮಕ್ಕೆ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ , ಡಾ.ಸೋಮಶೇಖರ್, ಡಾ.ಕಿರಣ್ ಕುಮಾರ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ವಚನ ಗಾಯನ, ಕಾಯಕ ದಾಸೋಹ ಮತ್ತು ಅನುಭವ ಗೋಷ್ಠಿ ಆಯೋಜಿಸಲಾಗಿದೆ ಎಂದರು.