ಸಾತ್ನಾ, ಏ.7- ಇಪ್ಪತ್ತರ ಹರೆಯದ ಸಾಮೂಹಿಕ ಅತ್ಯಾಚಾರ ಸಂತ್ರಸ್ತ ಮಹಿಳೆಯೊಬ್ಬರು ತನ್ನ ನಾಲ್ಕು ತಿಂಗಳ ಭ್ರೂಣವನ್ನು ಚೀಲದಟ್ಟಿಕೊಂಡು ಮಧ್ಯಪ್ರದೇಶದ ಸಾತ್ನಾ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ ಮನಕಲಕುವ ಘಟನೆ ನಡೆದಿದೆ. ಕಳೆದ ಹಲವು ತಿಂಗಳಿನಿಂದ ನಾಲ್ವರು ಕಾಮುಕರು ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಲ್ಲದೇ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ಮಹಿಳೆ ಉನ್ನತ ಪೆÇಲೀಸ್ ಅಧಿಕಾರಿ ಮುಂದೆ ತನ್ನ ದೈಹಿಕ ಮತ್ತು ಮಾನಸಿಕ ಯಾತನೆ ತೋಡಿಕೊಂಡಿದ್ದಾರೆ. ನೀರಜ್ ಪಾಂಡೆ, ಧೀರಜ್ ಪಾಂಡೆ, ಪ್ರೇಮ್ ಕುಮಾರ್, ರಾಜ್‍ಕುಮಾರ್ ಹಾಗೂ ನರ್ಸ್ ಸಪ್ನಾ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಏಳು ತಿಂಗಳ ಹಿಂದೆ ನಾಲ್ವರು ಆರೋಪಿಗಳು ಚಾಕು ತೋರಿಸಿ ಬೆದರಿಸಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ನಂತರ ಅದು ನಿರಂತರವಾಗಿ ಮುಂದುವರಿಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗರ್ಭಪಾತವಾದ ನಂತರ ಭ್ರೂಣವನ್ನು ಚೀಲದಲ್ಲಿ ಹಾಕಿ ತನಗೆ ನೀಡಿದ ನರ್ಸ್ ಸಪ್ನಾ, ಅದನ್ನು ಕಸಕ್ಕೆ ಎಸೆಯುವಂತೆ ಹೇಳಿದ್ದಳು. ಇದನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವ ಬೆದರಿಕೆಯನ್ನೂ ಹಾಕಲಾಗಿತ್ತು ಎಂದು ಮಹಿಳೆ ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಪೆÇಲೀಸ್ ಅಧೀಕ್ಷಕ ವಿ.ಡಿ.ಪಾಂಡೆ ತಿಳಿಸಿದ್ದಾರೆ.