ಬೆಂಗಳೂರು, ಏ.7- ಒರಿಸ್ಸಾದಿಂದ ಮಾದಕ ವಸ್ತು ಗಾಂಜಾವನ್ನು ಸರಬರಾಜು ಮಾಡಿಕೊಂಡು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಬೃಹತ್ ಜಾಲವನ್ನು ಸಿಸಿಬಿ ಪೆÇಲೀಸರು ಪತ್ತೆಹಚ್ಚಿ ಕೇರಳ ಮೂಲದ 9 ಮಂದಿಯನ್ನು ಬಂಧಿಸಿ, 50 ಲಕ್ಷ ರೂ. ಮೌಲ್ಯದ 108 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕೇರಳ ಮೂಲದ ಅನಸ್ (26), ಪ್ರಜಿಲ್ದಾಸ್ (27), ಸಾಜನ್ ದಾಸ್ (22), ನೈನೇಶ್ (36), ಶಾಫಿ ಕುಂಜು ಮರಕ್ಕರ್ (29), ಅಕ್ಷಯ್ಕುಮಾರ್ (22), ಶಿನಾಜ್ (27), ನಜೀಬ್ (25) ಮತ್ತು ಮುಸ್ತಾಕ್ (20) ಬಂಧಿತ ಆರೋಪಿಗಳು.
ಒರಿಸ್ಸಾ ರಾಜ್ಯದಿಂದ ಕರ್ನಾಟಕವೂ ಸೇರಿದಂತೆ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಮಾದಕ ವಸ್ತುವಾದ ಗಾಂಜಾ ಮಾರಾಟ ಮಾಡುವ ಜಾಲವೊಂದು ಬೆಂಗಳೂರು ನಗರವನ್ನು ಕೇಂದ್ರವನ್ನಾಗಿ ಮಾಡಿಕೊಂಡು ವ್ಯವಹಾರ ನಡೆಸುತ್ತಿರುವ ಬಗ್ಗೆ ಸಿಸಿಬಿ ಪೆÇಲೀಸರಿಗೆ ಮಾಹಿತಿ ಲಭಿಸಿದೆ.
ಕೇರಳ ರಾಜ್ಯದ ತ್ರಿಶೂರು ಮೂಲದ ನೈನೇಶ್ ಎಂಬುವವನು ಈ ಬೃಹತ್ ಜಾಲದ ಮುಖ್ಯಸ್ಥನಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೆÇಲೀಸರು, ಈ ಹಿಂದೆ ಜೀವನ್ಭಿಮಾ ನಗರ ಠಾಣೆ ಸೇರಿದಂತೆ ಕೇರಳದ ಹಲವು ಠಾಣೆಗಳಲ್ಲಿ ಈತನ ವಿರುದ್ಧ ಗಾಂಜಾ ಮಾರಾಟ-ಸಾಗಾಟದ ಬಗ್ಗೆ ಪ್ರಕರಣಗಳು ದಾಖಲಾಗಿರುವುದನ್ನು ಪತ್ತೆಹಚ್ಚಿದ್ದಾರೆ.
ಈತನ ಚಲನ-ವಲನಗಳ ಬಗ್ಗೆ ತೀವ್ರ ನಿಗಾ ಇಟ್ಟಿದ್ದ ಪೆÇಲೀಸರು ಕಾರ್ಯಾಚರಣೆ ವೇಳೆ ಹಲವು ಬಾರಿ ಪೆÇಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದನು. ಏ.4ರಂದು ನೈನೇಶ್ ಮತ್ತು ಈತನ ಸಹಚರರು ಗಾಂಜಾವನ್ನು ಬೆಂಗಳೂರಿಗೆ ತರಲು ಒರಿಸ್ಸಾಗೆ ಹೋಗುತ್ತಿರುವ ಬಗ್ಗೆ ಸಿಸಿಬಿ ಪೆÇಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.
ಇಂದಿರಾನಗರದ ಈಶ್ವರ ನಗರದಲ್ಲಿ ಆರೋಪಿ ನೈನೇಶ್ ವಾಸವಾಗಿದ್ದ ಮನೆಯನ್ನು ರಹಸ್ಯವಾಗಿ ಪತ್ತೆಹಚ್ಚಿ ಸ್ಥಳದಲ್ಲಿ ಮಾರುವೇಷದಲ್ಲಿ ಕಾದು ಕುಳಿತಿದ್ದರು.
ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಆರೋಪಿ ನೈನೇಶ್ ಮಾರುತಿ ಶಿಫ್ಟ್ ಕಾರಿನಲ್ಲಿ ತನ್ನ ಮನೆ ಬಳಿ ಬಂದಾಗ ಈತನನ್ನು ಹಿಂಬಾಲಿಸಿಕೊಂಡು ಇನೋವಾ ಕಾರು ಸಹ ಬಂದಿದೆ.
ತಕ್ಷಣ ಪೆÇಲೀಸರು ಈ ಎರಡೂ ವಾಹನಗಳನ್ನು ಸುತ್ತುವರಿದು ಪರಿಶೀಲಿಸಿದಾಗ ಏಳು ಬ್ಯಾಗ್ಗಳಲ್ಲಿ ಪ್ಯಾಕ್ ಮಾಡಿದ ಬಂಡಲ್ಗಳಿದ್ದು, ಅವುಗಳನ್ನು ಪರಿಶೀಲಿಸಿದಾಗ ಸುಮಾರು 108 ಕೆಜಿ ಮಾದಕ ವಸ್ತುವಾದ ಗಾಂಜಾ ಇರುವುದನ್ನು ಪತ್ತೆಹಚ್ಚಿದ್ದಾರೆ.
ತಕ್ಷಣ ನೈನೇಶ್ ಹಾಗೂ ಈತನ ಎಂಟು ಮಂದಿ ಸಹಚರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒರಿಸ್ಸಾ ರಾಜ್ಯದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾದ ಕಾಜುವಾಕಾ ಎಂಬಲ್ಲಿಂದ ಈ ಗಾಂಜಾವನ್ನು ಆರೋಪಿಗಳು ತಂದಿರುವುದನ್ನು ಪತ್ತೆಹಚ್ಚಿದ್ದಾರೆ.
ಆರೋಪಿಗಳು ಪ್ರಮುಖವಾಗಿ ನಗರದ ಈಜಿಪುರ, ಮುರುಗೇಶ್ಪಾಳ್ಯ, ಬಾಣಸವಾಡಿ, ಹೆಣ್ಣೂರು, ಕೆಆರ್ ಪುರಂ, ರಾಮಮೂರ್ತಿನಗರ ಸೇರಿದಂತೆ ವಿವಿಧ ಕಡೆ ತನ್ನ ಮಾರಾಟ ಜಾಲವನ್ನು ವಿಸ್ತರಿಸಿಕೊಂಡು 8 ರಿಂದ 10 ಗ್ರಾಂ ತೂಕದ ಸಣ್ಣ ಸಣ್ಣ ಪ್ಯಾಕೆಟ್ಗಳನ್ನಾಗಿ ಮಾಡಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ 300 ರಿಂದ 500ರೂ.ಗೆ ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ.
ನೈನೇಶ್ ವಾಸವಾಗಿದ್ದ ಮನೆಯಲ್ಲಿ ಗಾಂಜಾ ತೂಕ ಮಾಡುವ ಎಲೆಕ್ಟ್ರಾನಿಕ್ ತಕ್ಕಡಿ ಪ್ಯಾಕ್ ಮಾಡಲು ಬೇಕಾದ ವಸ್ತುಗಳು ಹಾಗೂ ಪ್ರತ್ಯೇಕವಾಗಿರಿಸಿದ್ದ 1ಕೆಜಿ, 100ಗ್ರಾಂ ತೂಕದ ಗಾಂಜಾ, 9 ಮೊಬೈಲ್, 2 ಕಾರುಗಳು, ವಿವಿಧ ಬ್ಯಾಂಕ್ನ ಎಟಿಎಂ ಕಾರ್ಡ್ಗಳು ಹಾಗೂ ಪಾಟ್ನಲ್ಲಿ ಬೆಳೆಸಿದ್ದ ಗಾಂಜಾ ಗಿಡಗಳನ್ನು ಸಹ ಪೆÇಲೀಸರು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ನಗರದಲ್ಲಿ ಒಂದೇ ಪ್ರಕರಣದಲ್ಲಿ ಇಷ್ಟು ಪ್ರಮಾಣದ ಗಾಂಜಾ ವಶಪಡಿಸಿಕೊಂಡಿರುವುದು ಇದೇ ಮೊದಲಾಗಿದೆ. ಈ ಕಾರ್ಯಾಚರಣೆಯಿಂದ ಮಾದಕ ವಸ್ತುಗಳಿಗೆ ಮಾರುಹೋಗಿದ್ದ ಹಲವಾರು ಅಮಾಯಕರ ಪ್ರಾಣ ರಕ್ಷಿಸಿದಂತಾಗಿದೆ.
ಎಸಿಪಿ ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ನಾರಾಯಣಗೌಡ, ಮುತ್ತೇಗೌಡ, ಶಿವರಾಜು ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ನಡೆಸಿತ್ತು.
ಬಹುಮಾನ: ಈ ಕಾರ್ಯಾಚರಣೆ ನಡೆಸಿದ ಪೆÇಲೀಸ್ ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿರುವ ನಗರ ಪೆÇಲೀಸ್ ಆಯುಕ್ತರು 1 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.