ಭಾರತ ಮತ್ತು ಪಾಕಿಸ್ತಾನ ಪುರುಷರ ಹಾಕಿ ತಂಡ 2-2 ಸಮ ಗೋಲುಗಳಿಂದ ರೋಚಕ ಡ್ರಾ:

ಗೋಲ್ಡ್‍ಕೋಸ್ಟ್, ಏ.7- ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮತ್ತು ಪಾಕಿಸ್ತಾನ ಪುರುಷರ ಹಾಕಿ ತಂಡ 2-2 ಸಮ ಗೋಲುಗಳಿಂದ ರೋಚಕ ಡ್ರಾ ಆಗಿದೆ. ಭಾರತ-ಪಾಕ್ ಪ್ರಥಮ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. 59ನೇ ನಿಮಿಷದಲ್ಲಿ ಗೋಲು ಬಾರಿಸಿದ ಪಾಕಿಸ್ತಾನದ ಅಲಿ ಮುಬಶರ್ ಪಂದ್ಯ ಡ್ರಾ ಆಗಲು ಕಾರಣರಾದರು. ಪಾಕ್ ಮೇಲೆ ಭಾರತ ಜಯ ಸಾಧಿಸಲಿದೆ ಎಂಬ ಕ್ರೀಡಾ ಪ್ರೇಮಿಗಳಿಗೆ ಡ್ರಾ ಫಲಿತಾಂಶ ನಿರಾಶೆ ಮೂಡಿಸಿದೆ. ಭಾರತದ ಪರ ದಿಲ್‍ಪ್ರೀತ್ ಸಿಂಗ್ ಮತ್ತು ಹರ್ಮಾನ್ ಪ್ರೀತ್‍ಸಿಂಗ್ ತಲಾ ಒಂದೊಂದು ಗೋಲು ಭಾರಿಸಿದರು. ಪಾಕಿಸ್ತಾನದ ಇರ್ಫಾನ್ ಜ್ಯೂನಿಯರ್ ಪ್ರಥಮ ಗೋಲು ಬಾರಿಸಿ ತಂಡಕ್ಕೆ ಆಸರೆಯಾದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ