ಗೋಲ್ಡ್ಕೋಸ್ಟ್:ಏ-7: ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ರಾಗಲ ವೆಂಕಟ್ ರಾಹುಲ್ ಶನಿವಾರ ವೇಟ್ಲಿಫ್ಟಿಂಗ್ನ 85 ಕೆ.ಜಿ. ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಜಯಸಿದ್ದಾರೆ. ಈ ಮೂಲಕ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಬೇಟೆ ಮುಂದುವರೆದಿದ್ದು, ಇದರೊಂದಿಗೆ ಭಾರತ ನಾಲ್ಕು ಚಿನ್ನದ ಪದಕಗಳನ್ನು ಗಳಿಸಿದಂತಾಗಿದೆ.
ರಾಹುಲ್ ಒಟ್ಟು 338 ಕೆ.ಜಿ. ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದರು. 85 ಕೆಜಿ ತೂಕದ ವಿಭಾಗದಲ್ಲಿ ರಾಗಲ ವೆಂಕಟ್ ರಾಹುಲ್ ಅಗ್ರ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ. ಎರಡು ಹಂತಗಳ ಸ್ಪರ್ಧೆಯಲ್ಲಿ ಕ್ರಮವಾಗಿ 151 ಕೆಜಿ, 187 ಕೆಜಿ ತೂಕ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರು.
ಇನ್ನು ಭಾರತದ ರಾಗಲ ವೆಂಕಟ್ ರಾಹುಲ್ ಗೆ ಡಾನ್ ಒಪೇಲೋಗ್ ತೀವ್ರ ಪೈಪೋಟಿ ನೀಡಿದರು. ಆದರೆ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.
ಕ್ರೀಡಾಕೂಟದಲ್ಲಿ ಭಾರತ ಇವರೆಗೆ 6 ಪದಗಳನ್ನು ಗೆದ್ದಿದೆ. ಅದರಲ್ಲಿ ನಾಲ್ಕು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಸೇರಿದೆ.
Commonwealth Games,Ragala Venkat Rahul, adds 4th gold to India’s, weightlifting