ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪಕ್ಷಕ್ಕೆ ಬೆಂಬಲ: ಜಾಗತಿಕ ಲಿಂಗಾಯಿತ ಮಹಾಸಭಾ ನಿರ್ಣಯ; ಮಾತೆಮಹಾದೇವಿ

ಬೆಂಗಳೂರು, ಏ.7- ಲಿಂಗಾಯಿತ ಧರ್ಮವನ್ನು ಪೆÇ್ರೀತ್ಸಾಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪಕ್ಷವನ್ನು ಬೆಂಬಲಿಸುವುದಾಗಿ ಜಾಗತಿಕ ಲಿಂಗಾಯಿತ ಮಹಾಸಭಾ ನಿರ್ಣಯ ಕೈಗೊಂಡಿದೆ ಎಂದು ಬಸವ ಪೀಠಾಧ್ಯಕ್ಷರಾದ ಮಾತೆಮಹಾದೇವಿ ಅವರು ತಿಳಿಸಿದ್ದಾರೆ.
ನಗರದ ಬಸವಭವನದಲ್ಲಿ ಮಹತ್ವದ ಸಭೆ ನಡೆಸಿದ ಸುಮಾರು 250ಕ್ಕೂ ಹೆಚ್ಚು ಮಠಾಧೀಶರು ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಸಭೆಯಲ್ಲಿ ಹಲವಾರು ವಿಷಯಗಳು ಚರ್ಚೆಯಾಗಿದ್ದು, ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜಕೀಯವಾಗಿ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬ ವಿಷಯದ ಮೇಲೆ ಚರ್ಚೆಯಾಗಿದೆ. ಲಿಂಗಾಯಿತ ಧರ್ಮವನ್ನು ಪೆÇ್ರೀ ಮತ್ತು ಬೆಂಬಲಿಸುವ ಪಕ್ಷಗಳಿಗೆ ಬೆಂಬಲ ನೀಡಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಲಿಂಗಾಯಿತ ಎಂಬ ಚಳವಳಿಗೆ ಸಿದ್ದರಾಮಯ್ಯ ಅವರು ಕಾರಣರಲ್ಲ. ಅದು ನಾವೇ ರೂಪಿಸಿದ ಹೋರಾಟ. ಅದಕ್ಕಾಗಿ ಯಾರನ್ನೂ ಹೊಣೆ ಮಾಡುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಲಿಂಗಾಯಿತ ಧರ್ಮದ ಅಧಿಕೃತ ಮಾನ್ಯತೆಗಾಗಿ ನಾವು ಸಲ್ಲಿಸಿದ ಮನವಿ ಆಧರಿಸಿ ಸರ್ಕಾರ ನಾಗಮೋಹನ್‍ದಾಸ್ ಅವರ ಸಮಿತಿ ರಚಿಸಿತು. ಸಮಿತಿ ವರದಿ ಆಧರಿಸಿ ಸಂಪುಟದಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
ನಾಗಮೋಹನದಾಸ್ ವರದಿಯನ್ನ್ನು ಅಂಗೀಕರಿಸಬಾರದು ತಿರಸ್ಕರಿಸಬೇಕೆಂದು ವೀರಶೈವ ಪಂಚಪೀಠಗಳ ಮಠಾಧೀಶರು ಒತ್ತಡ ಹೇರಿದ್ದು, ಒಂದು ವೇಳೆ ವರದಿಯನ್ನು ಅಂಗೀಕರಿಸಿದರೆ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಮಟ್ಟದಿಂದಲೂ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆಗ ಸಿದ್ದರಾಮಯ್ಯ ಅವರು ಅದಕ್ಕೂ ಮಣಿಯದೆ ಸಂಪುಟದಲ್ಲಿ ನಿರ್ಣಯ ಕೈಗೊಂಡಿದ್ದಾರೆ.

ಸಂಪುಟದಲ್ಲಿ ನಿರ್ಣಯ ಕೈಗೊಂಡ ನಂತರ ಕೊಪ್ಪಳಕ್ಕೆ ಹೋಗಿ ಅಶ್ವಾರೂಢ ಬಸವ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಇದು ಬಸವ ಸಂಕಲ್ಪ ಎಂದು ಹೇಳಿದರು.
ಸಿದ್ದರಾಮಯ್ಯ ಲಿಂಗಾಯಿತರಾಗಿ ಹುಟ್ಟದೇ ಇದ್ದರೂ ಬಸವ ಅನುಯಾಯಿ. ನಮ್ಮ ಹೋರಾಟಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ನಾಗಮೋಹನದಾಸ್ ವರದಿಯನ್ನು ಅನುಷ್ಠಾನಗೊಳಿಸದೆ ಕಾಲಹರಣ ಮಾಡಲು ಅವಕಾಶವಿತ್ತು. ಇನ್ನೊಂದು ವಾರ ವಿಳಂಬ ಮಾಡಿದ್ದರೂ ಚುನಾವಣೆ ನೀತಿ ಸಂಹಿತೆ ಬರುವ ಸಾಧ್ಯತೆ ಇತ್ತು. ಆದರೆ, ವಿಳಂಬ ಮಾಡದೆ ಸಿದ್ದರಾಮಯ್ಯ ನಿರ್ಣಯ ಕೈಗೊಂಡು ಬಸವ ಧರ್ಮದ ಅಸ್ಮಿತೆಗೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.

ಆರ್‍ಎಸ್‍ಎಸ್‍ನವರು ಲಿಂಗಾಯಿತ ಧರ್ಮಕ್ಕಾಗಿ ಹೋರಾಟ ಮಾಡುತ್ತಿರುವ ಪ್ರಮುಖರ ವಿರುದ್ಧ ಇನ್ನಿಲ್ಲದ ಅಪಪ್ರಚಾರ ನಡೆಸಿದ್ದಾರೆ. ಹೋರಾಟಗಾರರಿಗೆ ಉಗ್ರಗಾಮಿಗಳಿಂದ ಹಣ ಹರಿದು ಬರುತ್ತಿದೆ. ಅವರು ದೇಶ, ಧರ್ಮವನ್ನು ವಿಭಜಿಸುತ್ತಿದ್ದಾರೆ. ಹಿಂದೂ ಧರ್ಮ ಒಡೆಯುತ್ತಿದ್ದಾರೆ ಎಂಬೆಲ್ಲ ಆರೋಪಗಳನ್ನು ಮಾಡಲಾಗಿದೆ. ಇದೆಲ್ಲವೂ ಶುದ್ಧ ಸುಳ್ಳು. ನಾವು ಹಿಂದು ವಿರೋಧಿಗಳಲ್ಲ. ನಮ್ಮದು ಭಾರತೀಯ ಸಂಸ್ಕøತಿ. ಲಿಂಗಾಯಿತ ಧರ್ಮ. ಸಿಖ್, ಜೈನ್, ಭೌದ್ದ ಧರ್ಮಗಳು ಪ್ರತ್ಯೇಕ ಅಸ್ತಿತ್ವ ಕಂಡುಕೊಂಡಿವೆ. ಆದರೂ ಹಿಂದೂ ಧರ್ಮದಲ್ಲೇ ಇವೆ. ಲಿಂಗಾಯಿತ ಧರ್ಮವೂ ಅದೇ ರೀತಿ ಹಿಂದೂ ಧರ್ಮದ ಭಾಗವಾಗಿಯೇ ಇರಲಿವೆ. ಆದರೆ ನಮ್ಮ ಆಸ್ಮಿತೆಗಾಗಿ ಪ್ರತ್ಯೇಕ ಮಾನ್ಯತೆಯ ಅಗತ್ಯವಿದೆ ಎಂದು ಹೇಳಿದರು.

ಅಮೀತ್ ಶಾ ಹೇಳಿಕೆಗೆ ಖಂಡನೆ:
ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಲಾಗಿದೆ. ಅಧಿಕೃತ ಲಿಂಗಾಯಿತ ಧರ್ಮದ ಮಾನ್ಯತೆ ನೀಡುವುದಿಲ್ಲ ಎಂದು ಹೇಳಿಕೆ ನೀಡಲು ಅಮಿತ್ ಶಾ ಏನು ಪ್ರಧಾನಿಯೇ ? ರಾಷ್ಟ್ರಪತಿಗಳೇ ? ಕೇಂದ್ರ ಸಚಿವ ಸಂಪುಟ ಸದಸ್ಯರೇ ? ಕನಿಷ್ಠ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರೇ ಎಂದು ಪ್ರಶ್ನಿಸಲಾಗಿದೆ.

ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿರದೇ ಇದ್ದರೂ ಸರ್ವಾಧಿಕಾರಿಯಂತೆ ಅಮಿತ್ ಶಾ ಹೇಳಿಕೆ ನೀಡಿರುವುದು ಖಂಡನೀಯ. ಒಂದು ವೇಳೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಶಿಫಾರಸನ್ನು ತಿರಸ್ಕರಿಸಿದರೆ ಅದು ಅಮಿತ್ ಶಾ ಅವರ ಒತ್ತಡದ ಪರಿಣಾಮ ಮತ್ತು ರಾಜಕೀಯ ಪ್ರೇರಿತ ಎಂದು ಪರಿಗಣಿಸಬೇಕಾಗುತ್ತದೆ. ಕೇಂದ್ರದ ನಿರ್ಣಯದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಕಾರ್ಯಕ್ರಮದಲ್ಲಿ ಪಂಚಪೀಠಗಳ ಮಠಾಧೀಶರು, ಬಸವಣ್ಣ ಅವರ ತತ್ವವಿರುದ್ಧವಾಗಿ ನಡೆದುಕೊಳ್ಳುವ ಭಾವಚಿತ್ರಗಳ ಮಾಹಿತಿಯನ್ನು ಚರ್ಚಿಸಲಾಯಿತು.
ಸುಮಾರು ನೂರಾರು ಮಠಾಧೀಶರು ಸಭೆಯಲ್ಲಿ ಹಾಗೂ ಪತ್ರಿಕಾಗೋಷ್ಠಿಯಲ್ಲೂ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ