
ಕೋಲಾರ, ಏ.6-ಕರಗ ನಡೆಯುತ್ತಿದ್ದ ವೇಳೆ ಮನೆಯೊಂದರ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು 40 ಸಾವಿರ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಮಾಲೂರು ಪಟ್ಟಣದ ಮಾರುತಿ ಬಡಾವಣೆಯಲ್ಲಿ ನಡೆದಿದೆ.
ರಾತ್ರಿ ಪಟ್ಟಣದಲ್ಲಿ ಹಸಿ ಕರಗ ಉತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ ಮನೆ ಮಂದಿ ಎಲ್ಲಾ ಮನೆಗೆ ಬೀಗ ಹಾಕಿಕೊಂಡು ಕರಗ ನೋಡಲು ಹೋಗಿದ್ದರು. ಈ ಸಮಯ ಸಾಧಿಸಿದ ಕಳ್ಳರು ಮನೆಯ ಹಿಂಬಾಗಿಲನ್ನು ಮೀಟಿ ಒಳನುಗ್ಗಿ ಬೀರುವನ್ನು ಒಡೆದು ಚಿನ್ನದ ಉಂಗುರ, ಒಲೆ ಸೇರಿದಂತೆ ಸುಮಾರು 40 ಸಾವಿರ ಮೌಲ್ಯದ ಒಡವೆ ದೋಚಿದ್ದಾರೆ.
ಮನೆಯವರು ಕರಗದಿಂದ ಹಿಂದಿರುಗಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಕೂಡಲೇ ಈ ಸಂಬಂಧ ಮಾಲೂರು ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಕಳ್ಳರ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.