ಬಾಗೇಪಲ್ಲಿ, ಏ.6- ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರತ್ಯೇಕ ಮೂರು ಘಟನೆಗಳಲ್ಲಿ ದಾಖಲೆ ಇಲ್ಲದ ಮೂರು ಲಕ್ಷ ನಗದು ಹಾಗೂ ಎರಡು ಕಾರುಗಳನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ಯುವ ಶಕ್ತಿ ಸಮಾವೇಶಕ್ಕೆ ಅನುಮತಿ ಪಡೆಯದೆ ಭಂಟಿಂಗ್ಸ್ ಕಟ್ಟಿದ್ದಲ್ಲದೆ ಸಮಾವೇಶಕ್ಕೆ ಊಟ ವಿತರಿಸಿದ ಆರೋಪದ ಮೇಲೆ ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಟಿ.ಚಂದ್ರಮೋಹನಬಾಬು ಎಂಬುವವರ ವಿರುದ್ದ ಎರಡು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಹೆದ್ದಾರಿ 7 ರಲ್ಲಿನ ತನಿಖಾ ಠಾಣೆಯಲ್ಲಿ ಸೆಕ್ಟರ್ ಅಧಿಕಾರಿ ಆರ್.ಶಿವಪ್ಪ ನೇತೃತ್ವದಲ್ಲಿ ಸಿಬ್ಬಂದಿ ಪರಿಶೀಲಿಸುತ್ತಿದ್ದಾಗ ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 3 ಲಕ್ಷ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಆಂಧ್ರ ಪ್ರದೇಶದ ಅನಂತಪುರದಿಂದ ಮಾರುತಿ ಇಗ್ನಿಸ್ ನೊಂದಣೆಯಿಲ್ಲದ ಹೊಸ ಕಾರಿನಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ಅಧಿಕಾರಿಗಳು ತನಿಖೆ ನಡೆಸಿದ್ದ ಸಂದರ್ಭದಲ್ಲಿ ಕಾರಿನಲ್ಲಿ ದಾಖಲೆಗಳಿಲ್ಲದ ಮೂರು ಲಕ್ಷ ಹಣ ಪತ್ತೆಯಾಗಿದೆ. ಕಾರಿನಲ್ಲಿದ್ದ ಶ್ರೀಧರ್ ಎಂಬುವವರು ಯಾವುದೇ ಸೂಕ್ತ ದಾಖಲೆಗಳನ್ನು ಸಲ್ಲಿಸದ ಕಾರಣ 3 ಲಕ್ಷ ರೂ. ನಗದು ಮತ್ತು ಇಗ್ನಿಸ್ ಕಾರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲ್ಲೂಕಿನ ಚೇಳೂರು ಠಾಣಾ ವ್ಯಾಪ್ತಿಯ ಹೊಸಹುಡ್ಯ ಸಮೀಪದ ಚೆಕ್‍ಪೆÇೀಸ್ಟ್ ಬಳಿ ಅಧಿಕಾರಿಗಳು ಬಿಎಂಡಬ್ಲಯು ಕಾರನ್ನು ಸೆಕ್ಟರ್ ಅಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಅದರಲ್ಲಿ ಎಂಇಪಿ ಪಕ್ಷದ ಬಾವುಟಗಳು, ಬಂಟಿಂಗ್ಸ್, ಪೆÇೀಸ್ಟರ್ ಮತ್ತಿತರ ಪ್ರಚಾರ ಸಾಮಗ್ರಿಗಳು ಕಂಡು ಬಂದಿದ್ದು ಪೂರ್ವಾನುಮತಿ ಇಲ್ಲದೆ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಐಶಾರಾಮಿ ಕಾರನ್ನು ಮತ್ತು ಅದರಲ್ಲಿದ್ದ ಅರುಣ್, ಇಕ್ಬಾಲ್, ಸಿದ್ದಪ್ಪ, ಗೌಸ್ ಎಂಬುವವರನ್ನು ವಶಕ್ಕೆ ಪಡೆದುಕೊಂಡು ಚೇಳೂರು ಪೆÇಲೀಸರಿಗೆ ಒಪ್ಪಿಸಿದ್ದಾರೆ.