ಅಖಿಲ್ ರಬೀಂದ್ರ ಬೆಂಗಳೂರು ಮೂಲದ ರೇಸ್ ಚಾಲಕ ಜಿಟಿ4 ಯುರೋಪಿಯನ್ ಸರಣಿಯಲ್ಲಿ ಬಿಎಂಡಬ್ಲ್ಯು ಎಂ4, ಜಿಟಿ4 ಕಾರನ್ನು ಸಿಲ್ವರ್ ಕ್ಲಾಸ್ ವಿಭಾಗದಲ್ಲಿ ಚಾಲನೆ ಮಾಡಲಿದ್ದಾರೆ

ಬೆಂಗಳೂರು, ಏ.6-ಅಖಿಲ್ ರಬೀಂದ್ರ ಬೆಂಗಳೂರು ಮೂಲದ ರೇಸ್ ಚಾಲಕ, 2018ರ ಋತುವಿನಲ್ಲಿ ಫ್ರೆಂಚ್ ತಂಡ 3ವೈ ಟೆಕ್ನಾಲಜಿ ತಂಡದೊಂದಿಗೆ ಪ್ರತಿಷ್ಠಿತ ಜಿಟಿ4 ಯುರೋಪಿಯನ್ ಸರಣಿಯಲ್ಲಿ ಬಿಎಂಡಬ್ಲ್ಯು ಎಂ4, ಜಿಟಿ4 ಕಾರನ್ನು ಸಿಲ್ವರ್ ಕ್ಲಾಸ್ ವಿಭಾಗದಲ್ಲಿ ಚಾಲನೆ ಮಾಡಲಿದ್ದಾರೆ.

ಬ್ರಿಟಿಷ್ ಜಿಟಿಯಲ್ಲಿ ಅಖಿಲ್, ಮೆಕ್‍ಲಾರೆನ್ ಜಿಟಿ ಅಕಾಡೆಮಿ ಚಾಲಕರಾಗಿ ಗರೇಜ್ 59 ಮೆಕ್‍ಲಾರೆನ್ 570 ಎಸ್ ಕಾರನ್ನು ಬ್ರಿಟಿಷ್ ಜಿಟಿ ಚಾಂಪಿಯನ್‍ಶಿಪ್‍ನಲ್ಲಿ ಚಾಲನೆ ಮಾಡಿದ್ದರು.

ಯುರೋಪಿಯನ್ ಸರಣಿಯಲ್ಲಿ ಭಾಗವಹಿಸುವುದನ್ನು ಪ್ರಕಟಿಸಿ ಮಾತನಾಡಿರುವ ಅವರು, ಯುರೋಪ್‍ನ ಅನೇಕ ಕಡೆ ಇರುವ ಶ್ರೇಷ್ಠ ಟ್ರ್ಯಾಕ್‍ಗಳಲ್ಲಿ ಬೃಹತ್ ಹಾಗೂ ಸ್ಪರ್ಧಾತ್ಮಕವಾಗಿರುವ ಗ್ರಿಡ್‍ಗಳಲ್ಲಿ ಸ್ಪರ್ಧಿಸುವುದು ನಿಜಕ್ಕೂ ರೋಚಕವಾಗಿರುತ್ತದೆ. ಪ್ರಸ್ತುತ ಋತು ಅತ್ಯುತ್ತಮ ಫಲಿತಾಂಶ ನೀಡುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

ಚಾಂಪಿಯನ್‍ಶಿಪ್‍ನಲ್ಲಿ ಬಿಎಂಡಬ್ಲೂನೊಂದಿಗೆ ಮೊದಲ ಬಾರಿಗೆ ಕಣಕ್ಕಿಳಿದಿದೆ. ಚಾಂಪಿಯನ್‍ಶಿಪ್‍ನಲ್ಲಿ ಮರ್ಸಿಡೀಸ್, ಪಾರ್ಶೆ, ಮೆಕ್‍ಲಾರೆನ್, ಆಸ್ಟನ್ ಮಾರ್ಟಿನ್, ಆಡಿ, ಕೆಟಿಎಂ, ಚೆವರ್ಲೆಟ್ ಮಸೇರತ್ ಹಾಗೂ ಗಿನೆಟ್ ಕಾರುಗಳು ಹೆಸರು ಮಾಡಿವೆ. ಪ್ರಬಲ ಸ್ಪರ್ಧಿಗಳಾಗಿವೆ.

ಕಳೆದ ವರ್ಷ ಮೆಕ್‍ಲಾರೆನ್ ಜೊತೆಗೂಡಿ ಸಿಂಗಲ್ ಸೀಟರ್‍ನಲ್ಲಿ ಭಾಗವಹಿಸಿದ್ದ ಅಖಿಲ್‍ಗೆ ಇದು ಎರಡನೇ ಪೂರ್ಣ ಪ್ರಮಾಣದ ಜಿಟಿ ಸೀರೀಸ್. ನೂತನ 3ವೈ ಟೆಕ್ನಾಲಜಿಯ ಬಿಎಂಡಬ್ಲ್ಯು ಎಂ 4, ಜಿಟಿ4 ಕಾರನ್ನು ಅಖಿಲ್ ಕೆಲವಾರದ ಹಿಂದೆ ಬಾರ್ಸೆಲೊನಾದಲ್ಲಿ ಪರೀಕ್ಷಿಸಿ ನಂತರ ನಿರ್ಧಾರ ತೆಗೆದುಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ