
ಮಿಡ್ನಾಪುರ್, ಏ.6-ಚಹಾ ಅಂಗಡಿಗೆ ಟ್ರಕ್ಕೊಂದು ನುಗ್ಗಿ ಆರು ಮಂದಿ ಮೃತಪಟ್ಟು, 12 ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ-6ರಲ್ಲಿ ಸಹಜಾಕ್ಲ್ ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಭೀಕರ ಘಟನೆ ನಡೆದಿದೆ. ಗ್ರಾಮಸ್ಥರ ಗುಂಪೆÇಂದು ಟೀ ಅಂಗಡಿ ಮುಂದೆ ಜಮಾಯಿಸಿ ಬಿಸ್ಕತ್ತುಗಳನ್ನು ತಿನ್ನುತ್ತಾ ಚಹಾ ಸೇವಿಸುತ್ತಿದ್ದರು. ಈ ಸಂದರ್ಭದಲ್ಲಿ ಯಮರೂಪಿ ಟ್ರಕ್ ಅಂಗಡಿಗೆ ನುಗ್ಗಿ ಸಾವು-ನೋವು ಸಂಭವಿಸಿತು.