51 ಸಾವಿರ ರೂ. ಪರಿಹಾರ ನೀಡುವಂತೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್ ಅವರಿಗೆ ನ್ಯಾಯಾಲಯ ಆದೇಶಾ

ಮೈಸೂರು, ಏ.5- ಮಾಜಿ ಕಾಪೆರ್Çೀರೇಟರ್ ಎಂ.ಸಿ.ಚಿಕ್ಕಣ್ಣ ಅವರಿಗೆ 51 ಸಾವಿರ ರೂ. ಪರಿಹಾರ ನೀಡುವಂತೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್ ಅವರಿಗೆ ನ್ಯಾಯಾಲಯ ಆದೇಶಿಸಿದೆ.
ಚಿಕ್ಕಣ್ಣ ಅವರು ಎಂ.ಕೆ.ಸೋಮಶೇಖರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ 51 ಸಾವಿರ ಪರಿಹಾರ ನೀಡುವಂತೆ ಶಾಸಕ ಸೋಮಶೇಖರ್‍ಗೆ ಸೂಚಿಸಿದೆ.

ಶಾಸಕ ಸೋಮಶೇಖರ್ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದವರೆಂದು ಸುಳ್ಳು ಪ್ರಮಾಣಪತ್ರ ಸಲ್ಲಿಸಿ ಇಂಡಿಯನ್ ಆಯಿಲ್ ಕಾಪೆರ್Çೀರೇಷನ್ ಸಂಸ್ಥೆಯ ಗ್ಯಾಸ್ ಏಜೆನ್ಸಿ ಡೀಲರ್‍ಶಿಪ್ ಪಡೆದಿದ್ದಾರೆ ಎಂದು 2008ರ ಸೆಪ್ಟೆಂಬರ್‍ನಲ್ಲಿ ಚಿಕ್ಕಣ್ಣ ಪತ್ರಿಕಾ ಹೇಳಿಕೆ ನೀಡಿದ್ದರು.
ಈ ಬಗ್ಗೆ ಸೋಮಶೇಖರ್ ಪ್ರತಿಕ್ರಿಯಿಸಿ ತಾವು ನಿರುದ್ಯೋಗಿ ಪದವೀಧರರ ಕೋಟಾದಿಂದ ಗ್ಯಾಸ್ ಏಜೆನ್ಸಿ ಪಡೆದಿರುವುದಾಗಿ ಹೇಳಿದ್ದರು.
ಇದಕ್ಕೆ ಮತ್ತೆ ಚಿಕ್ಕಣ್ಣ, ಸೋಮಶೇಖರ್ ಸಿಎಫ್‍ಟಿಆರ್‍ಐ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ನಿರುದ್ಯೋಗಿ ಪದವೀಧರರ ಕೋಟಾದಡಿ ನಿಯಮ ಬಾಹಿರವಾಗಿ ಗ್ಯಾಸ್ ಏಜೆನ್ಸಿ ಪಡೆದಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.
ಈ ಬಗ್ಗೆ ಸೋಮಶೇಖರ್ ಚಿಕ್ಕಣ್ಣ ವಿರುದ್ಧ ಕೆ.ಆರ್.ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೆÇಲೀಸರು ಈ ಬಗ್ಗೆ ತನಿಖೆ ನಡೆಸಿ ಸೋಮಶೇಖರ್ ನೀಡಿದ್ದ ದೂರಿನಲ್ಲಿ ಸತ್ಯಾಂಶವಿಲ್ಲ ಎಂದು ನ್ಯಾಯಾಲಯಕ್ಕೆ ಬಿ ರಿಪೆÇೀರ್ಟ್ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಸೋಮಶೇಖರ್ ಅವರು ಆಗಲೇ ಪತ್ರಿಕಾಗೋಷ್ಠಿ ನಡೆಸಿ ತಾವು ಗ್ಯಾಸ್ ಏಜೆನ್ಸಿಯನ್ನು ನಿರುದ್ಯೋಗಿ ಪದವೀಧರರ ಕೋಟಾದಿಂದಲೇ ಪಡೆದಿದ್ದೇನೆ. ಆದರೆ, ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂದು ಹೇಳಿದ್ದರು.
ಇದಲ್ಲದೆ ಈ ಬಗ್ಗೆ ತಾವು ಸುಮ್ಮನಿರಬೇಕಾದರೆ 15 ಲಕ್ಷ ರೂ. ನೀಡಬೇಕೆಂದು ಚಿಕ್ಕಣ್ಣ ಹೇಳಿದ್ದಾಗಿ ಸೋಮಶೇಖರ್ ಆರೋಪಿಸಿದ್ದರು. ಆ ಸಮಯದಲ್ಲಿ ನಾನು ಹಣ ನೀಡುವುದಿಲ್ಲ ಎಂದಿದ್ದಕ್ಕೆ ಮಾಜಿ ಸಚಿವ ಎಸ್.ಎ.ರಾಮದಾಸ್ ಅವರಿಂದ ಹಣ ಪಡೆದು ಹೀಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಚಿಕ್ಕಣ್ಣ ಜೀವನದುದ್ದಕ್ಕೂ ರೋಲ್‍ಕಾಲ್ ಮಾಡುತ್ತಲೇ ಇರುವುದರಿಂದ ಮೇಯರ್ ಆಗಲಿಲ್ಲ ಎಂದು ಟೀಕಿಸಿದ್ದರು.

ಇದರಿಂದ ಮನನೊಂದು ಚಿಕ್ಕಣ್ಣ ಅವರು ಶಾಸಕ ಸೋಮಶೇಖರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಬಗ್ಗೆ ಮೈಸೂರಿನ ಒಂದನೇ ಹೆಚ್ಚುವರಿ ಪ್ರಥಮ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ಎಸ್.ಆಳ್ವಾ ಅವರು ಮೊಕದ್ದಮೆಯನ್ನು ವಜಾಗೊಳಿಸಿ ತೀರ್ಪು ನೀಡಿದ್ದರು.

ಈ ತೀರ್ಪನ್ನು ಪ್ರಶ್ನಿಸಿ ಚಿಕ್ಕಣ್ಣ ಅವರು ಮೈಸೂರಿನ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನೆಯ ವಿಚಾರಣೆಯನ್ನು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸುಧೀಂದ್ರನಾಥ್ ಅವರು ನಡೆಸಿ ಚಿಕ್ಕಣ್ಣ ಅವರಿಗೆ ಮಾನಹಾನಿ ಆಗಿರುವುದರಿಂದ 51 ಸಾವಿರ ರೂ.ಗಳನ್ನು ಶೇ.6ರ ಬಡ್ಡಿಯೊಂದಿಗೆ ನಷ್ಟ ಪರಿಹಾರ ರೂಪದಲ್ಲಿ ಪ್ರಕರಣದ ಖರ್ಚುವೆಚ್ಚ ಸಹಿತ ನೀಡುವಂತೆ ಶಾಸಕ ಸೋಮಶೇಖರ್ ಅವರಿಗೆ ಆದೇಶಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ