ಕೊಳ್ಳೇಗಾಲ, ಏ.5- ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ವಚನ ಭ್ರಷ್ಟರಾಗಿದ್ದೀರಿ ಅದನ್ನೆ ಮರೆತು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಲಘುವಾಗಿ ಮಾತನಾಡಿರುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಂಸದ ಆರ್.ಧೃವನಾರಾಯಣ್ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ಗಾಂಧಿಯವರು ಈ ದೇಶದ ದೊಡ್ಡ ಪಕ್ಷವೊಂದರ ನಾಯಕರು. ಅಂದು ಕೆಲವೇ ರಾಜ್ಯಗಳಿಗೆ ಸೀಮಿತವಾಗಿದ್ದ ಉದ್ಯೋಗ ಖಾತ್ರಿ ಯೋಜನೆಯನ್ನು ದೇಶದ ಎಲ್ಲೆಡೆ ವಿಸ್ತರಿಸಲು ಯುವ ಸಂಸದರರೊಡನೆ ನಿಯೋಗ ತೆರಳಿ, ಬರ ಪೀಡಿತ ಪ್ರದೇಶಗಳನ್ನು ಗುರುತಿಸಿ ಜನರು ಉತ್ತಮ ಜೀವನ ಮಾಡಲು ದಾರಿ ಮಾಡಿಕೊಟ್ಟಿದ್ದಾರೆ ಎಂದರು.
2008ರಲ್ಲಿ ರಾಹುಲ್ಗಾಂಧಿರವರು ರಾಜ್ಯಕ್ಕೆ ಪ್ರವಾಸ ಬಂದಾಗ ನಮ್ಮ ಜಿಲೆಯ ಬಿಆರ್ ಹಿಲ್ಸ್ ಗೆ ಭೇಟಿ ನೀಡಿದ್ದ ಸಂಧರ್ಭದಲ್ಲಿ ಬುಡಕಟ್ಟು ಜನಾಂಗದವರಿಗೆ ಅನುಕೂಲವಾಗುವಂತೆ ಅರಣ್ಯ ಕಾಯ್ದೆ ಜಾರಿಗೊಳಿಸಿದರು. ಬುಡಕಟ್ಟು ಜನರಿಗೆ ಹಕ್ಕುಪತ್ರ ವಿತರಿಸಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದರು.
ಕುಮಾರಸ್ವಾಮಿರವರು ಜೆಡಿಎಸ್ನಲ್ಲಿ ಅಧಿಕಾರ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯನವರೇ ಕಾರಣ 20 ತಿಂಗಳು ಮುಖ್ಯಮಂತ್ರಿ ಅಧಿಕಾರ ಅನುಭವಿಸಿ ಯಡಿಯೂರಪ್ಪರವರಿಗೆ ಅಧಿಕಾರ ಬಿಟ್ಟುಕೊಡದೇ ಇರುವುದನ್ನು ಕುಮಾರಸ್ವಾಮಿಯವರು ಮರೆತಿರಬಹುದು, ಆದರೆ ಜನತೆ ಮರೆತಿಲ್ಲ ಎಂದು ತಿರುಗೇಟು ನೀಡಿದರು.
ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಎಲ್ಲಾ ನಿಗಮದ ಸಾಲ ಮನ್ನಾ ಮಾಡಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನ್ನಭಾಗ್ಯ ಮೂಲಕ ರಾಜ್ಯದಲ್ಲಿ ಹಸಿವಿನಿಂದ ಸಾವು ಅನುಭವಿಸುವುದು, ಬರಪೀಡಿತ ಜನರು ಬೀಕ್ಷೆ ಬೇಡುವುದು ತಪ್ಪಿದೆÉ ಎಂದರು.
ನಮ್ಮ ರಾಜ್ಯದಲ್ಲಿ ಸಣ್ಣ ರೈತರು ಮಾಡಿದ್ದ ಅಲ್ಪಾವಧಿ ಸಾಲ ಮನ್ನ್ನಾ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಮುಂದಾಗಲಿಲ್ಲ ಎಂದು ಆರೋಪಿಸಿದರು.
ಕಾಂಗ್ರೇಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ, ಉಪ್ಪಾರ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ನಗರಸಭೆ ಅಧ್ಯಕ್ಷ ಶಾಂತರಾಜು, ಸದಸ್ಯರಾದ ಅಕ್ಮಲ್, ಹರ್ಷ, ಎ.ಪಿ.ಶಂಕರ್, ರಾಘವೇಂದ್ರ, ನಾಮನಿರ್ದೇಶಿತ ಸದಸ್ಯ ಮನೋಹರ್, ಮುಖಂಡ ಮನೋಹರ್ ಇನ್ನಿತರರು ಇದ್ದರು.