ನವದೆಹಲಿ, ಏ.5- ಪಾಕಿಸ್ತಾನದ ಷೆಲ್ ದಾಳಿಯಿಂದ ಗಡಿ ಭಾಗಗಳ ಗ್ರಾಮಗಳ ಜನರಿಗೆ ರಕ್ಷಣೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ 14,460 ಬಂಕರ್ಗಳನ್ನು (ಭೂಗರ್ಭದ ಅಡಗುತಾಣಗಳು) ನಿರ್ಮಿಸಲು ಯೋಜನೆ ರೂಪಿಸಿದೆ. ಜಮ್ಮು ಮತ್ತು ಕಾಶ್ಮೀರದ ಐದು ಗಡಿ ಜಿಲ್ಲೆಗಳಾದ ಸಾಂಬಾ, ಪೂಂಚ್, ಜಮ್ಮು, ಕತುವಾ ಮತ್ತು ರಜೌರಿಯಲ್ಲಿ 13,029 ಬಂಕರ್ಗಳನ್ನು ಸರ್ಕಾರ ನಿರ್ಮಿಸಲಿದೆ. ಇದರಲ್ಲಿ 8-10 ಮಂದಿ ಸುರಕ್ಷಿತವಾಗಿ ಆಶ್ರಯ ಪಡೆಯಬಹುದು. ಅಲ್ಲದೇ ಇನ್ನೂ 1,431 ಬೃಹತ್ ಸಮುದಾಯ ಬಂಕರ್ಗಳನ್ನೂ ಸಹ ನಿರ್ಮಿಸಲು ಉದ್ದೇಶಿಸಿದೆ. ಈ ಜಿಲ್ಲೆಗಳಲ್ಲಿ ಸಮುದಾಯ ಬಂಕರ್ಗಳು ತಲಾ 40 ಜನರಿಗೆ ಸ್ಥಳಾವಕಾಶ ನೀಡಲಿದೆ.
ಗಡಿ ಜಿಲ್ಲೆಗಳ ಗ್ರಾಮಗಳು ಅಗಾಗ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಗಳು ಮತ್ತು ಅಪ್ರಚೋದಿತ ಷೆಲ್ ದಾಳಿಗಳಿಂದ ತೀವ್ರ ಸಂಕಷ್ಟ ಅನುಭವಿಸುತ್ತಿವೆ. ಇಂಥ ಘಟನೆಗಳಲ್ಲಿ ಸಾವು-ನೋವು, ಆಸ್ತಿ-ಪಾಸ್ತಿಗಳಿಗೆ ನಷ್ಟ ಸಾಮಾನ್ಯವಾಗಿದೆ. ಸಾಂಬಾದಲ್ಲಿ 2,515 ವ್ಯಕ್ತಿಗತ ಹಾಗೂ 8 ಸಮುದಾಯ ಬಂಕರ್ಗಳು ನಿರ್ಮಾಣವಾಗಲಿವೆ. ಜಮ್ಮುವಿನಲ್ಲಿ 12,000 ಮತ್ತು 120, ರಜೌರಿಯಲ್ಲಿ 4,918 ಮತ್ತು 372 ಹಾಗೂ ಕತುವಾದಲ್ಲಿ 3,076 ವ್ಯಕ್ತಿಗತ ಬಂಕರ್ಗಳು ಹಾಗೂ ಪೂಂಚ್ನಲ್ಲಿ 1.320 ಮತ್ತು 688 ಬಂಕರ್ಗಳನ್ನು ನಿರ್ಮಿಸಲಾಗುತ್ತದೆ. ರಾಜ್ಯ ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಬಿಲ್ಡಿಂಗ್ಸ್ ಕನ್ಸ್ಟ್ರಕ್ಷನ ಕಾಪೆರ್Çರೇಷನ್ (ಎನ್ಬಿಸಿಸಿ) ಈ ಬಂಕರ್ಗಳನ್ನು ನಿರ್ಮಿಸಲಿದೆ.