ಜಬಲ್ಪುರ,ಏ.5- ದೆಹಲಿ ಮತ್ತು ಇತರ ರಾಜ್ಯಗಳಿಂದ ಕಾರ್ಲ್ಗರ್ಲ್ಗಳನ್ನು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಮಹಿಳೆಯರನ್ನು ಪೆÇಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ ಹಲವು ದಿನಗಳಿಂದ ತಾಯಿ ಹಾಗೂ ಮಕ್ಕಳಿಬ್ಬರು ಬೇರೆ ನಗರಗಳಿಂದ ಕಾಲ್ ಗಲ್ರ್ಸ್ ಕರೆಯಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಮಾಹಿತಿ ಪಡೆದ ಪೆÇಲೀಸರು ದಾಳಿ ನಡೆಸಿ ದೆಹಲಿ ಮೂಲದ 25 ವರ್ಷದ ಕಾಲ್ಗರ್ಲ್ ಒಬ್ಬಳನ್ನು ವಶಕ್ಕೆ ಪಡೆದಿದ್ದು, ತಾಯಿ ಹಾಗೂ ಮಕ್ಕಳು ಕಾಲ್ಗರ್ಲ್ಗೆ 40 ಸಾವಿರ ನೀಡಿ ಮೂರು ದಿನಕ್ಕಾಗಿ ಕರೆಸಿಕೊಂಡಿದ್ದರು ಎಂದು ಹೇಳಲಾಗಿದೆ.