ಅಲಹಾಬಾದ್ ,ಏ.5-ರಾಷ್ಟ್ರದ್ರೋಹ ಆರೋಪ ಪ್ರಕರಣ ಸಂಬಂಧ ಗುಜರಾತ್ನ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ವಿರುದ್ಧ ಇಲ್ಲಿನ ಸೆಷನ್ಸ್ ಕೋರ್ಟ್ ವಾರೆಂಟ್ ಜಾರಿ ಮಾಡಿದ್ದು, ವಿಚಾರಣೆಯನ್ನು ಏ.25ಕ್ಕೆ ಮುಂದೂಡಿದೆ.
2015 ರ ಆಗಸ್ಟ್ ನಲ್ಲಿ ಪಟೇಲ್ ಸಮುದಾಯದ ಮೀಸಲಾತಿ ಹೋರಾಟದ ಸಂದರ್ಭ ಹಿಂಸಾಚಾರ ನಡೆದು 13 ಮಂದಿ ಸಾವನ್ನಪ್ಪಿದ್ದರು. ಈ ಸಂಬಂಧ ಹಾರ್ದಿಕ್ ಪಟೇಲ್ ಮತ್ತಿತರರ ವಿರುದ್ಧ ಅಹಮದಾಬಾದ್ ಕ್ರೈಂ ಬ್ರ್ಯಾಂಚ್ ಪೆÇಲೀಸರು ರಾಷ್ಟ್ರದ್ರೋಹ ಆರೋದಡಿ ಪ್ರಕರಣ ದಾಖಲಿಸಿದ್ದರು.
ಹಾಗಾಗಿ ಇನ್ನು ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಹಾರ್ದಿಕ್ ಪಟೇಲ್ ಕೋರ್ಟ್ ವಿಚಾರಣೆಗೆ ಗೈರು ಆಗಿದ್ದರಿಂದ ನ್ಯಾ. ಡಿ.ಪಿ. ಮಹಿದಾ ಅವರು ನಿನ್ನೆ ಹಾರ್ದಿಕ್ ಪಟೇಲ್ ವಿರುದ್ಧ ಜಾಮೀನು ಸಹಿತ ವಾರೆಂಟ್ ಹೊಡೆಸಿ ಪ್ರಕರಣದ ವಿಚಾರಣೆಯನ್ನು ಏ.25ಕ್ಕೆ ಮುಂದೂಡಿದ್ದಾರೆ.