`ಮಡಮಕ್ಕಿ’ ಎನ್ನುವ ಸದಭಿರುಚಿಯ ಸಿನಿಮಾವನ್ನು ನಿರ್ಮಿಸಿ, ಅದರಲ್ಲಿ ನಾಯಕನಾಗಿ ನಟಿಸಿದವರು ತನುಷ್. ಈಗ ತನುಷ್ `ನಂಜುಂಡಿ ಕಲ್ಯಾಣ’ ಎಂಬ ಮತ್ತೊಂದು ಚಿತ್ರ ಮಾಡಿದ್ದಾರೆ. `ನಂಜುಂಡಿ ಕಲ್ಯಾಣ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ನಟ, ನಿರ್ದೇಶಕರಾಗಿ ರಂಗಭೂಮಿ, ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಸಾಕಷ್ಟು ಕೆಲಸ ಮಾಡಿರುವ ರಾಜೇಂದ್ರ ಕಾರಂತ್ `ನಂಜುಂಡಿ ಕಲ್ಯಾಣ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ.
`ಮಡಮಕ್ಕಿ’ಯನ್ನು ನಿರ್ಮಿಸಿದ್ದ ಶ್ರೀರಾಮಾ ಟಾಕೀಸ್ ಲಾಂಛನದಲ್ಲೇ ತಯಾರಾಗಿರುವ `ನಂಜುಂಡಿ ಕಲ್ಯಾಣ’ದ ನಾಯಕಿಯಾಗಿ ಶ್ರಾವ್ಯ ಅಭಿನಯಿಸಿದ್ದಾರೆ. ಉಳಿದಂತೆ, ಕುರಿ ಪ್ರತಾಪ್, ರಾಜೇಂದ್ರ ಕಾರಂತ್, ಪದ್ಮಜಾರಾವ್ ಹಾಗೂ ಬಹುತೇಕ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ
ಕೆ.ಎಂ.ಪ್ರಕಾಶ್ ಸಂಕಲನ, ಅನೂಪ್ ಸೀಳಿನ್ ಸಂಗೀತ, ಮಂಜುನಾಥ್ ನಾಯಕ್ ಛಾಯಾಗ್ರಹಣ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮತ್ತು ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.