ಬೆಂಗಳೂರು, ಏ.5- ನಗರದಲ್ಲಿ ರಾತ್ರಿ ನಾಲ್ಕು ಕಡೆ ಸರ ಅಪಹರಣ ಪ್ರಕರಣಗಳು ನಡೆದಿದ್ದು, ನಾಲ್ವರು ಮಹಿಳೆಯರು ಸರ ಕಳೆದುಕೊಂಡಿದ್ದಾರೆ.
ಜ್ಞಾನಭಾರತಿ: ನಾಗದೇವನಹಳ್ಳಿಯ ರಾಗಿಮಿಲ್ ರಸ್ತೆಯಲ್ಲಿ ಸುಕನ್ಯಾ ಎಂಬುವವರು ರಾತ್ರಿ 7.15ರಲ್ಲಿ ಮಗಳ ಜತೆ ನಡೆದು ಹೋಗುತ್ತಿದ್ದರು.
ಈ ವೇಳೆ ಇಬ್ಬರು ಸರಗಳ್ಳರು ಬೈಕ್‍ನಲ್ಲಿ ಹಿಂಬಾಲಿಸಿ ಬಂದು ಸುಕನ್ಯಾ ಅವರು ಧರಿಸಿದ್ದ 30 ಗ್ರಾಂ ಸರ ಕಿತ್ತು ಪರಾರಿಯಾಗಿದ್ದಾರೆ.
ಕೆಂಗೇರಿ: ಕೆಂಗೇರಿ ಉಪನಗರದ 5ನೆ ಮುಖ್ಯರಸ್ತೆ ನಿವಾಸಿ ಸಂಜೀವಮ್ಮ ಎಂಬುವವರು ರಾತ್ರಿ 7.30ರಲ್ಲಿ ಮನೆ ಮುಂದೆ ನಿಂತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಸರಗಳ್ಳರ ಪೈಕಿ ಒಬ್ಬಾತ ಇವರ 20 ಗ್ರಾಂ ಸರ ಕಿತ್ತು ಪರಾರಿಯಾಗಿದ್ದಾರೆ.
ಅನ್ನಪೂರ್ಣೇಶ್ವರಿ ನಗರ: ನಾಗರಬಾವಿ ಮುಖ್ಯರಸ್ತೆಯ 6ನೆ ಕ್ರಾಸ್, ಬಿಡಿಎ ಲೇಔಟ್ ನಿವಾಸಿ ಸುಶೀಲಾ ಎಂಬುವವರು ಮನೆ ಮುಂದೆ ರಾತ್ರಿ 8.30ರಲ್ಲಿ ನಿಂತಿದ್ದಾಗ ಬೈಕ್‍ನಲ್ಲಿ ಬಂದ ಸರಗಳ್ಳ 20 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾನೆ.
ಇದೇ ವ್ಯಾಪ್ತಿಯ 2ನೆ ಬ್ಲಾಕ್, 2ನೆ ಹಂತ, ನಾಗರಬಾವಿ 3ನೆ ಮುಖ್ಯರಸ್ತೆಯಲ್ಲಿ ರಾತ್ರಿ 9 ಗಂಟೆ ಸಮಯದಲ್ಲಿ ರಮಾಮಣಿ ಎಂಬುವವರು ನಡೆದು ಹೋಗುತ್ತಿದ್ದಾಗ ಬೈಕ್‍ನಲ್ಲಿ ಹಿಂಬಾಲಿಸಿ ಬಂದ ಇಬ್ಬರು ಸರಗಳ್ಳರು 20 ಗ್ರಾಂ ಸರ ಎಗರಿಸಿದ್ದಾರೆ.
ಸಹಾಯಕ್ಕಾಗಿ ಕೂಗಿಕೊಂಡಿದ್ದು, ದಾರಿಹೋಕರು ನೆರವಿಗಾಗಿ ಆಗಮಿಸುವಷ್ಟರಲ್ಲಿ ಸರಗಳ್ಳರು ಕಣ್ಮರೆಯಾಗಿದ್ದಾರೆ.
ಈ ನಾಲ್ಕೂ ಪ್ರಕರಣಗಳನ್ನು ಆಯಾ ಠಾಣೆ ಪೆÇಲೀಸರು ದಾಖಲಿಸಿಕೊಂಡು ಸರಗಳ್ಳರ ಬೇಟೆಗೆ ಶೋಧ ಕೈಗೊಂಡಿದ್ದಾರೆ.