![TerroristsRenamed](http://kannada.vartamitra.com/wp-content/uploads/2018/02/TerroristsRenamed-678x381.jpg)
ಶ್ರೀನಗರ,ಏ.5- ಉಗ್ರರು ಮನೆಯೊಂದಕ್ಕೆ ನುಗ್ಗಿ ಇಬ್ಬರು ನಾಗರಿಕರನ್ನು (ತಂದೆ-ಮಗನನ್ನು) ಅಪಹರಣ ಮಾಡಿರುವ ಘಟನೆ ಜಮ್ಮುಕಾಶ್ಮೀರದಲ್ಲಿ ನಡೆದಿದೆ.
ಬಂಡಿಪೆÇೀರ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ 11.45ರ ಸಮಯದಲ್ಲಿ ಅಬ್ದುಲ್ ಗಫ್ಟರ್ ಬಟ್ ಎಂಬುವರ ಮನೆಗೆ ಶಂಕಿತ ಲಷ್ಕರ್ ಉಗ್ರರ ಗುಂಪೆÇಂದು ನುಗ್ಗಿ ಅಬ್ದುಲ್ ಮತ್ತು ಆತನ ಮಗ ಮನ್ ಜೂರ್ಬಟ್ಗೆ ಥಳಿಸಿದ್ದಲ್ಲದೆ ಅವರಿಬ್ಬರನ್ನು ಅಪಹರಣ ಮಾಡಿದ್ದಾರೆ. ಆದರೆ ದಾರಿ ಮಧ್ಯೆ ಅಬ್ದುಲ್ ಉಗ್ರರಿಂದ ತಪ್ಪಿಸಿಕೊಂಡಿದ್ದು, ಗುಂಡಿನ ದಾಳಿಯಲ್ಲಿ ಆತ ಗಾಯಗೊಂಡಿದ್ದಾನೆ. ಸದ್ಯ ಆಸ್ಪತ್ರೆಗೆ ದಾಖಲಾಗಿರುವ ಅಬ್ದುಲ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಬ್ದುಲ್ ಮಗ ಮನ್ ಜೂರ್ ಬಟ್ ಉಗ್ರರ ಹತ್ತಿರ ಇದ್ದಾನೆ ಎಂದು ಹೇಳಲಾಗಿದೆ.