ಬೆಂಗಳೂರು,ಏ.5-ರಾಜ್ಯದಲ್ಲಿ ಶತಾಯಗತಾಯ ಈ ಬಾರಿ ಅಧಿಕಾರ ಹಿಡಿಯಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಇದೇ 9 ಇಲ್ಲವೇ 10ರಂದು ತನ್ನ ಮೊದಲ 120 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ನವದೆಹಲಿಯಲ್ಲಿ ಇದೇ 9ರಂದು ಬಿಜೆಪಿ ಸಂಸದೀಯ ಮಂಡಳಿಯ ಸಭೆ ನಡೆಯಲಿದೆ. ಅದಕ್ಕೂ ಮುನ್ನ ಅಂದರೆ 8ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪಟ್ಟಿಗೆ ಅಂತಿಮ ಸ್ಪರ್ಶ ನೀಡಲಿದ್ದಾರೆ.
ಸ್ಥಳೀಯ ನಾಯಕರ ಜೊತೆ ಚರ್ಚಿಸಿದ ಬಳಿಕ ಪಟ್ಟಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ರವಾನೆಯಾಗಲಿದೆ. ನಂತರ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚಿಸಿ ಅಮಿತ್ ಷಾ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಬೆಂಗಳೂರಿನ ಹೊರವಲಯದ ರಮಣ ಶ್ರೀ ಕಂಫರ್ಟ್ ರೆಸಾರ್ಟ್ನಲ್ಲಿ ನಿನ್ನೆಯಿಂದ ಆರಂಭವಾಗಿರುವ ಪದಾಧಿಕಾರಿಗಳ ಸಭೆ ಇಂದು ಕೂಡ ಮುಂದುವರೆದಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ,ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಸೇರಿದಂತೆ ಮತ್ತಿತರ ಮುಖಂಡರು ಭಾಗವಹಿಸಿದ್ದರು.
ಈಗಾಗಲೇ ಮೂರು ಹಂತಗಳಲ್ಲಿ ನಡೆಸಿರುವ ಆಂತರಿಕ ಸಮೀಕ್ಷೆ ಆಧಾರದಲ್ಲಿ 120ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಂಡಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಮೊದಲಿಗೆ ಪಕ್ಷ ನಿಷ್ಠೆ ಹಾಗೂ ಎರಡನೆಯದಾಗಿ ಗೆಲ್ಲುವ ಸಾಮರ್ಥ್ಯ ಪರಿಗಣಿಸಲಾಗಿದೆ. ಮೊದಲ ಹಂತದಲ್ಲಿ ಹಾಲಿ ಶಾಸಕರಿಗೆಲ್ಲಾ ಟಿಕೆಟ್ ಪ್ರಕಟವಾಗಲಿದೆ.
ಜತೆಗೆ ಪಕ್ಷಕ್ಕೆ ಇತ್ತೀಚೆಗೆ ಬಂದಿರುವ ಕುಡಚಿ ರಾಜೀವ್, ಮಾನಪ್ಪ ವಜ್ಜಲ್, ಡಾ.ಶಿವರಾಜ್ ಪಾಟೀಲ್, ಹಾಲಾಡಿ ಶ್ರೀನಿವಾಸಶೆಟ್ಟಿ, ಸಿ.ಪಿ.ಯೋಗೇಶ್ವರ್, ಕುಮಾರ್ ಬಂಗಾರಪ್ಪ, ಸಂದೇಶ್ ಸ್ವಾಮಿ, ಮಾಲೀಕಯ್ಯ ಗುತ್ತೇದಾರ್, ಮಲ್ಲಿಕಾರ್ಜುನ ಖೂಬಾ ಅವರಿಗೂ ಟಿಕೆಟ್ ಪಕ್ಕಾ ಮಾಡಲಾಗಿದೆ.
ಯಡಿಯೂರಪ್ಪ ಅವರು ಶಿಕಾರಿಪುರ ಹಾಗೂ ಈಶ್ವರಪ್ಪ ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗಿದ್ದು, ವಿ.ಸೋಮಣ್ಣ ಅಥವಾ ಅವರ ಪುತ್ರ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ದೊರೆಯಲಿದೆ. ಯಾವ ಕ್ಷೇತ್ರ ಎಂಬುದು ಸೋಮಣ್ಣ ಅವರ ಆಯ್ಕೆಗೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.
ಈ ಬಾರಿಯ ಚುನಾವಣೆಯಲ್ಲಿ ಮುಖ್ಯವಾಗಿ 70ರಿಂದ 80 ಹೊಸ ಮುಖಗಳಿಗೂ ಟಿಕೆಟ್ ಸಿಗಲಿದೆ. ಆದರೆ ಹೆಚ್ಚು ಹೊಸ ಪ್ರಯೋಗಗಳಿಗೆ ಕೈ ಹಾಕದೆ ಗೆಲ್ಲುವ ಕುದುರೆಗಳಿಗಷ್ಟೇ ಟಿಕೆಟ್ ನೀಡುವ ಮಾನದಂಡ ಅನುಸರಿಸಲಾಗಿದೆ.
ಸಂಭವನೀಯ ಅಭ್ಯರ್ಥಿಗಳ ಈ ಕೆಳಂಡಂತಿದೆ
1) ಶಿಕಾರಿಪುರ-ಯಡಿಯೂರಪ್ಪ
2) ಹುಬ್ಬಳ್ಳಿ-ಧಾರವಾಡ ಸೆಂಟ್ರಲ್- ಜಗದೀಶ್ ಶೆಟ್ಟರ್
3) ಪದ್ಮನಾಭನಗರ- ಆರ್.ಅಶೋಕ್
4) ಅಥಣಿ-ಲಕ್ಷಣ್ ಸವದಿ
5) ಅರಬಾವಿ-ಬಾಲಚಂದ್ರ ಜಾರಕಿಹೊಳಿ
6) ನಿಪ್ಪಾಣಿ- ಶಶಿಕಲಾ ಜೊಲ್ಲೆ
7) ಬೈಲಹೊಂಗಲ-ವಿಶ್ವನಾಥ ಪಾಟೀಲ್
8) ಸವದತ್ತಿ-ಆನಂದ ಮಾಮನಿ
9) ಬೆಳಗಾವಿ ಗ್ರಾಮಾಂತರ- ಸಂಜಯ ಪಾಟೀಲ್
10) ಕಾಗವಾಡ- ಭರಮಗೌಡ ಕಾಗೆ
11) ಹುಕ್ಕೇರಿ-ಉಮೇಶ್ ಕತ್ತಿ
12) ಕುಡಚಿ- ಪಿ.ರಾಜೀವ್
13) ರಾಯಭಾಗ-ದುರ್ಯೋಧನ ಐಹೊಳೆ
14) ಮುಧೋಳ- ಗೋವಿಂದ ಕಾರಜೋಳ
15) ಬೀಳಗಿ-ಮುರುಗೇಶ್ ನಿರಾಣಿ
16) ಔರಾದ್-ಪ್ರಭು ಚೌಹ್ವಾಣ್
17) ಸಿಂಧಗಿ-ರಮೇಶ್ ಭೂಸನೂರು
18) ಗುಲ್ಬರ್ಗ ದಕ್ಷಿಣ- ದತ್ತಾತ್ರೇಯ ಪಾಟೀಲ್ ರೇವೂರ
19) ದೇವದುರ್ಗ- ಶಿವನಗೌಡ ನಾಯಕ್
20) ರಾಯಚೂರು ಗ್ರಾಮಾಂತರ- ತಿಪ್ಪರಾಜು
21) ರಾಯಚೂರು ನಗರ-ಡಾ.ಶಿವರಾಜ್ ಪಾಟೀಲ್
22) ಲಿಂಗಸಗೂರು -ಮಾನಪ್ಪ ವಜ್ಜಲ್
23) ಶಿಗ್ಗಾಂವ್- ಬಸವರಾಜ ಬೊಮ್ಮಾಯಿ
24) ಕುಷ್ಟಗಿ-ದೊಡ್ಡನಗೌಡ ಹನುಮಗೌಡ ಪಾಟೀಲ್
25) ಕಂಪ್ಲಿ -ಸುರೇಶ್ಬಾಬು
26) ಮೊಳಕಾಲ್ಮೂರು -ತಿಪ್ಪೇಸ್ವಾಮಿ
27) ಚಿತ್ರದುರ್ಗ- ತಿಪ್ಪಾರೆಡ್ಡಿ
28) ತುಮಕೂರು ಗ್ರಾಮಾಂತರ-ಸುರೇಶ್ ಗೌಡ
29) ಕೆಜಿಎಫ್- ವೈ.ರಾಮಕ್ಕ
30) ಮಾಲೂರು-ಕೃಷ್ಣಯ್ಯಶೆಟ್ಟಿ
31) ಚೆನ್ನಪಟ್ಟಣ-ಸಿ.ಪಿ.ಯೋಗೇಶ್ವರ್
32) ಕಾರ್ಕಳ-ಸುನಿಲ್ಕುಮಾರ್
33) ಶೃಂಗೇರಿ- ಜೀವರಾಜ್
34) ಚಿಕ್ಕಮಗಳೂರು-ಸಿ.ಟಿ.ರವಿ
35) ಶಿರಸಿ-ವಿಶ್ವೇಶ್ವರ ಹೆಗಡೆ ಕಾಗೇರಿ
36) ಹುಬ್ಬಳ್ಳಿ-ಧಾರವಾಡ ಪಶ್ಚಿಮ-ಅರವಿಂದ ಬೆಲ್ಲದ್
37) ಹಿರೇಕೆರೂರು- ಯು.ಬಿ.ಬಣಕಾರ್
38) ಕುಂದಾಪುರ-ಹಾಲಾಡಿ ಶ್ರೀನಿವಾಸಶೆಟ್ಟಿ
39) ಸೊರಬ- ಕುಮಾರ್ ಬಂಗಾರಪ್ಪ
40) ಮುದ್ದೇಬಿಹಾಳ- ಎ.ಎಸ್.ಪಾಟೀಲ್ ನಡಹಳ್ಳಿ
41) ಬಬಲೇಶ್ವರ- ವಿಜುಗೌಡ ಪಾಟೀಲ್
42) ಹೊನ್ನಾಳಿ -ಎಂ.ಪಿ.ರೇಣುಕಾಚಾರ್ಯ
43) ಮಲ್ಲೇಶ್ವರಂ -ಡಾ.ಸಿ.ಎನ್.ಅಶ್ವಥ್ನಾರಾಯಣ
44) ದಾಸರಹಳ್ಳಿ-ಎಸ್.ಮುನಿರಾಜು
45) ಬಸವನಗುಡಿ-ರವಿಸುಬ್ರಹ್ಮಣ್ಯ/ ಕಟ್ಟೆ ಸತ್ಯನಾರಾಯಣ
46) ರಾಜಾಜಿನಗರ- ಎಸ್.ಸುರೇಶ್ಕುಮಾರ್
47) ಸಿ.ವಿ.ರಾಮನ್ನಗರ- ಎಸ್.ರಘು
48) ಜಯನಗರ-ಬಿ.ಎನ್.ವಿಜಯಕುಮಾರ್
49) ಬೆಂಗಳೂರು ದಕ್ಷಿಣ- ಎಂ.ಕೃಷ್ಣಪ್ಪ
50) ಶಿವಾಜಿನಗರ-ಕಟ್ಟಾ ಸುಬ್ರಹ್ಮಣ್ಯ ನಾಯ್ಡು
51) ಹೆಬ್ಟಾಳ-ನಾರಾಯಣಸ್ವಾಮಿ
52) ಯಲಹಂಕ – ಎಸ್.ಆರ್.ವಿಶ್ವನಾಥ್
53) ಮಹದೇವಪುರ-ಅರವಿಂದ ಲಿಂಬಾವಳಿ
54) ಸುಳ್ಯ- ಎಸ್.ಅಂಗಾರ
55) ಶಹಾಪುರ- ಗುರು ಪಾಟೀಲ್
56) ಸುರಪುರ- ರಾಜುಗೌಡ
57) ಆನೇಕಲ್ -ನಾರಾಯಣಸ್ವಾಮಿ
58) ಶ್ರೀರಂಗಪಟ್ಟಣ-ನಂಜುಂಡೇಗೌಡ
59) ಹನೂರು-ಪ್ರೀತಮ್ ನಾಗಪ್ಪ
60) ಕೊಳ್ಳೇಗಾಲ-ಜಿ.ಎನ್.ನಂಜುಂಡಸ್ವಾಮಿ
61) ಹರಪನಹಳ್ಳಿ-ಕರುಣಾಕರ ರೆಡ್ಡಿ
62) ನವಲಗುಂದ-ಶಂಕರಪಾಟೀಲ್ ಮುನೇನಕೊಪ್ಪ
63) ಹಾನಗಲ್- ಸಿ.ಎಂ.ಉದಾಸಿ
64) ನರಗುಂದ-ಸಿ.ಸಿ.ಪಾಟೀಲ್
65) ಬಾಗಲಕೋಟೆ- ವೀರಣ್ಣ ಚರಂತಿಮಠ
66) ಚೆನ್ನಗಿರಿ- ಮಾಡಾಳು ವಿರೂಪಾಕ್ಷಪ್ಪ
67) ಬಳ್ಳಾರಿ ನಗರ- ಸೋಮಶೇಖರ ರೆಡ್ಡಿ
68) ತಿಪಟೂರು-ಬಿ.ಸಿ.ನಾಗೇಶ್
69) ಜಗಳೂರು-ರಾಮಚಂದ್ರ
70) ಹೊಸಪೇಟೆ-ಗವಿಯಪ್ಪ
71) ತೇರದಾಳ- ಸಿದ್ದು ಸವದಿ
72) ಚಿಂಚೋಳಿ-ಸುನಿಲ್ ವಲ್ಯಾಪುರೆ
73) ಕುಮಟ-ದಿನಕರ ಶೆಟ್ಟಿ
74) ಭಟ್ಕಳ- ಜೆ.ಡಿ.ನಾಯ್ಕ
75) ಹುನಗುಂದ- ದೊಡ್ಡನಗೌಡ ಪಾಟೀಲ್
76) ತೀರ್ಥಹಳ್ಳಿ – ಅರಗ ಜ್ಞಾನೇಂದ್ರ
77) ಸಿರಗುಪ್ಪ- ಸೋಮಲಿಂಗಪ್ಪ
78) ಮೂಡಿಗೆರೆ- ಎಂ.ಪಿ.ಕುಮಾರಸ್ವಾಮಿ
79) ಬೊಮ್ಮನಹಳ್ಳಿ – ಸತೀಶ್ ರೆಡ್ಡಿ
80) ಸಾಗರ- ಬೇಳೂರು ಗೋಪಾಲಕೃಷ್ಣ
81) ದೇವರಹಿಪ್ಪರಗಿ- ಮಹಾದೇವಿ
82) ಯಲಹಂಕ-ಎಸ್. ಆರ್.ವಿಶ್ವನಾಥ್
83) ಬೆಳಗಾವಿ ದಕ್ಷಿಣ- ಅಭಯ್ ಪಾಟೀಲ್
84) ಮಡಿಕೇರಿ- ಅಪ್ಪಚ್ಚು ರಂಜನ್
85) ವಿರಾಜಪೇಟೆ-ಬೋಪಯ್ಯ
86) ಹೊಸಕೋಟೆ- ಬಚ್ಚೇಗೌಡ
87) ಕೆ.ಆರ್.ಪುರಂ-ನಂದೀಶ್ರೆಡ್ಡಿ
88) ಸರ್ವಜ್ಞನಗರ- ಪದ್ಮನಾಭರೆಡ್ಡಿ/ಎಂ.ಎನ್.ರೆಡ್ಡಿ/ ಗೋವಿಂದರಾಜು
89) ಚಿಕ್ಕಪೇಟೆ- ಎನ್.ಆರ್.ರಮೇಶ್/ ಹೇಮಚಂದ್ರ ಸಾಗರ್/ಉದಯ ಗರುಡಾಚಾರ್
90) ಶಾಂತಿನಗರ- ವಾಸುದೇವಮೂರ್ತಿ/ಶ್ರೀಧರ್ರೆಡ್ಡಿ
91) ಆಳಂದ-ಸುಭಾಷ್ ಗುತ್ತೇದಾರ್
92) ಆಫ್ಜಲ್ಪುರ- ಮಾಲೀಕಯ್ಯ ಗುತ್ತೇದಾರ್
93) ತರೀಕೆರೆ- ಡಿ.ಎಸ್.ಸುರೇಶ್
94) ಚಿಕ್ಕನಾಯಕನಹಳ್ಳಿ-ಜೆ.ಸಿ.ಮಾಧುಸ್ವಾಮಿ
95) ಬಸವಕಲ್ಯಾಣ- ಮಲ್ಲಿಕಾರ್ಜುನ ಖೂಬಾ
96) ವಿಜಯನಗರ- ಎಚ್.ರವೀಂದ್ರ
97) ಚಾಮರಾಜಪೇಟೆ- ಲಕ್ಷ್ಮಿನಾರಾಯಣ/ಬಿ.ವಿ.ಗಣೇಶ್
98) ಶಿವಮೊಗ್ಗ- ಈಶ್ವರಪ್ಪ
99) ಮೈಸೂರಿನ ಎನ್.ಆರ್.ಕ್ಷೇತ್ರ- ಸಂದೇಶ್ಸ್ವಾಮಿ
100) ಗೋವಿಂದರಾಜನಗರ- ಉಮೇಶ್ಶೆಟ್ಟಿ/ವಿ.ಸೋಮಣ್ಣ
101) ಕನಕಗರಿ- ಬಸವರಾಜ ದಡೆಸೂರು
102) ಶಿವಮೊಗ್ಗ ಗ್ರಾಮೀಣ-ಅಶೋಕ್ ನಾಯಕ
103) ಭದ್ರಾವತಿ- ಪ್ರವೀಣ್ ಪಾಟೀಲ್
104) ಹೊಸದುರ್ಗ-ಗೂಳಿಹಟ್ಟಿ ಶೇಖರ್
105) ಹಿರಿಯೂರು-ಪೂರ್ಣಿಮಾ
106) ಮಾಯಕೊಂಡ -ಬಸವರಾಜ್ ನಾಯಕ್/ಆನಂದಪ್ಪ
107) ಕುಣಿಗಲ್-ಕೃಷ್ಣ ಕುಮಾರ್
108) ತುರುವೇಕೆರೆ- ಮಸಾಲೆ ಜಯರಾಂ
109) ಸೇಡಂ- ರಾಜು ತೇಲ್ಕರ್
110) ಮಾಲೂರು-ಕೃಷ್ಣಯ್ಯ ಶೆಟ್ಟಿ
111) ತುಮಕೂರು ನಗರ-ಜ್ಯೋತಿ ಗಣೇಶ್/ಸೊಗಡು ಶಿವಣ್ಣ
112) ಕೂಡ್ಲಗಿ-ಮುತ್ತಯ್ಯ
113) ಹಗರಿ ಬೊಮ್ಮನಹಳ್ಳಿ -ನೇಮಿ ನಾಯಕ್
114) ಹೂವಿನಹಡಗಲಿ-ಚಂದ್ರಪ್ಪ
115) ಚಳ್ಳಕೆರೆ-ಕುಮಾರಸ್ವಾಮಿ
116) ಬೀದರ್ ಉತ್ತರ -ಸೂರ್ಯವಂಶಿ ನರಸಿಂಹರಾವ್
117) ವರುಣಾ-ಬಿ.ವೈ.ವಿಜೇಂದ್ರ
118) ವಿಜಾಪುರ-ಬಸವನಗೌಡ ಪಾಟೀಲ್ ಯತ್ನಾಳ್
119) ಯಲಬುರ್ಗ-ಹಾಲಪ್ಪ ಆಚಾರ್
120) ಬಳ್ಳಾರಿ ಗ್ರಾಮೀಣ-ಶ್ರೀರಾಮುಲು/ಜಯಶಾಂತ
121) ಮಹಾಲಕ್ಷ್ಮಿ ಲೇಔಟ್-ಎಂ.ನಾಗರಾಜ್/ಹರೀಶ್