ಜಿಟಿ4 ಯುರೋಪಿಯನ್ ಸರಣಿಯಲ್ಲಿ ಅಖಿಲ್ ರಬೀಂದ್ರ

ಬೆಂಗಳೂರು, ಏಪ್ರಿಲ್ 5, 2018: ಅಖಿಲ್ ರಬೀಂದ್ರ ಬೆಂಗಳೂರು ಮೂಲದ ರೇಸ್ ಚಾಲಕ, ಸ್ಕಾಟ್ಲೆಂಡಿನ ಎಡಿನ್ ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ, 2018ರ ಋತುವಿನಲ್ಲಿ ಫ್ರೆಂಚ್ ತಂಡ 3ವೈ ಟೆಕ್ನಾಲಜಿ ತಂಡದೊಂದಿಗೆ ಪ್ರತಿಷ್ಠಿತ ಜಿಟಿ4 ಯುರೋಪಿಯನ್ ಸರಣಿಯಲ್ಲಿ ಬಿಎಂಡಬ್ಲ್ಯು ಎಂ4, ಜಿಟಿ4 ಕಾರನ್ನು ಸಿಲ್ವರ್ ಕ್ಲಾಸ್ ವಿಭಾಗದಲ್ಲಿ ಚಾಲನೆ ಮಾಡಲಿದ್ದಾರೆ. ಅವರೊಂದಿಗೆ ಬೆಲ್ಜಿಯಂನ ಅನುಭವಿ ಚಾಲಕ ಸ್ಟೀಫನೆ ಲೆಮೆರೆಟ್ ಇರುತ್ತಾರೆ ಎಂದು ಅಖಿಲ್ ತಿಳಿಸಿದರು.

ಬ್ರಿಟಿಷ್ ಜಿಟಿಯಿಂದ ಅಖಿಲ್ ಈ ರೇಸಿಗೆ ಬಂದಿದ್ದಾರೆ. ಬ್ರಿಟಿಷ್ ಜಿಟಿಯಲ್ಲಿ ಅಖಿಲ್, ಮೆಕ್‍ಲಾರೆನ್ ಜಿಟಿ ಅಕಾಡೆಮಿ ಚಾಲಕರಾಗಿ ಗರೇಜ್59 ಮೆಕ್‍ಲಾರೆನ್ 570 ಎಸ್ ಕಾರನ್ನು ಬ್ರಿಟಿಷ್ ಜಿಟಿ ಚಾಂಪಿಯನ್‍ಶಿಪ್‍ನಲ್ಲಿ ಚಾಲನೆ ಮಾಡಿದ್ದರು. ಯುರೋಪಿಯನ್ ಸರಣಿಯಲ್ಲಿ ಭಾಗವಹಿಸುವುದನ್ನು ಪ್ರಕಟಿಸಿ ಮಾತನಾಡಿರುವ ಅವರು, ಯುರೋಪ್‍ನ ಅನೇಕ ಕಡೆ ಇರುವ ಶ್ರೇಷ್ಠ ಟ್ರ್ಯಾಕ್‍ಗಳಲ್ಲಿ ಬೃಹತ್ ಹಾಗೂ ಸ್ಪರ್ಧಾತ್ಮಕವಾಗಿರುವ ಗ್ರಿಡ್‍ಗಳಲ್ಲಿ ಸ್ಪರ್ಧಿಸುವುದು ನಿಜಕ್ಕೂ ರೋಚಕವಾಗಿರುತ್ತದೆ. ಪ್ರಸ್ತುತ ಋತು ಅತ್ಯುತ್ತಮ ಫಲಿತಾಂಶ ನೀಡುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂಬ ಭರವಸೆಯ ಮಾತನಾಡಿದ್ದಾರೆ.
ತಂಡದ ಮ್ಯಾನೇಜರ್ ಗಿಲೇಮ್ ಮೆಲಾರ್ಡ್ ಹೇಳಿದ್ದು, ಜಿಟಿ4 ಯುರೋಪಿಯನ್ ಸೀರೀಸ್ ಸರಣಿಯ ಚಾಲಕರ ಜೋಡಿ ಕುರಿತು ನನಗೆ ಸಂತೃಪ್ತಿ ಇದೆ. ಪ್ರತಿಭೆ ಮತ್ತು ಅನುಭವದ ಜೋಡಿ ಹೊಂದಿದ್ದೇವೆ. ಸಿಲ್ವರ್ ಕಪ್ ಸ್ಪರ್ಧೆಯಲ್ಲಿ ಅಖಿಲ್ ರಬೀಂದ್ರ ಮತ್ತು ಸ್ಟೀಪೆನೆ ರೆಮೆರೆಟ್ ಉತ್ತಮ ಪ್ರದರ್ಶನ ತೋರಿ ಪ್ರಶಸ್ತಿ ಗೆಲ್ಲುತ್ತಾರೆ ಎಂಬ ನಿರೀಕ್ಷೆ ನಮ್ಮದು. ಪ್ರತಿ ಸ್ಪರ್ಧೆಯಲ್ಲಿ ಜೋಡಿ ಮೊದಲು ಮೂರು ಸ್ಥಾನದಲ್ಲಿ ಇರಬೇಕು ಎಂಬುದು ನಮ್ಮ ಗುರಿ. ವಿಶ್ವದಲ್ಲಿ ಜಿಟಿ4 ಚಾಂಪಿಯನ್‍ಶಿಪ್‍ನಲ್ಲಿ ಜಿಟಿ4 ಯುರೋಪಿಯನ್ ಸೀರೀಸ್ ಅತ್ಯಂತ ಕಠಿಣವಾದುದ್ದು, ಹಾಗೂ ಸವಾಲಿನದಾಗಿದೆ. ಆದ್ದರಿಂದ ಸವಾಲು ಸುಲಭವಾಗಿರುವುದಿಲ್ಲ.
ಚಾಂಪಿಯನ್‍ಶಿಪ್‍ನಲ್ಲಿ ಬಿಎಂಡಬ್ಲೂನೊಂದಿಗೆ ಮೊದಲ ಬಾರಿಗೆ ಕಣಕ್ಕಿಳಿದಿದೆ. ಚಾಂಪಿಯನ್‍ಶಿಪ್‍ನಲ್ಲಿ ಮರ್ಸಿಡೀಸ್, ಪಾರ್ಶೆ, ಮೆಕ್‍ಲಾರೆನ್, ಆಸ್ಟನ್ ಮಾರ್ಟಿನ್, ಆಡಿ, ಕೆಟಿಎಂ, ಚೆವರ್ಲೆಟ್ ಮಸೇರತ್ ಹಾಗೂ ಗಿನೆಟ್ ಕಾರುಗಳು ಹೆಸರು ಮಾಡಿವೆ. ಪ್ರಬಲ ಸ್ಪರ್ಧಿಗಳಾಗಿವೆ.

ಕಳೆದ ವರ್ಷ ಮೆಕ್‍ಲಾರೆನ್ ಜೊತೆಗೂಡಿ ಸಿಂಗಲ್ ಸೀಟರ್‍ನಲ್ಲಿ ಭಾಗವಹಿಸಿದ್ದ ಅಖಿಲ್‍ಗೆ ಇದು ಎರಡನೇ ಪೂರ್ಣ ಪ್ರಮಾಣದ ಜಿಟಿ ಸೀರೀಸ್. ನೂತನ 3ವೈ ಟೆಕ್ನಾಲಜಿಯ ಬಿಎಂಡಬ್ಲ್ಯು ಎಂ 4, ಜಿಟಿ4 ಕಾರನ್ನು ಅಖಿಲ್ ಕೆಲವಾರದ ಹಿಂದೆ ಬಾರ್ಸೆಲೊನಾದಲ್ಲಿ ಪರೀಕ್ಷಿಸಿ ನಂತರ ನಿರ್ಧಾರ ತೆಗೆದುಕೊಂಡಿದ್ದಾರೆ.

ದಿನಾಂಕ                ಸುತ್ತು                         ಸ್ಥಳ
ಏ-7-8                ಸುತ್ತು-1                     ಸರ್ಕಿಟ್ ಜೋಲ್ಡರ್, ಬೆಲ್ಜಿಯಂ
ಮೇ-5-6             ಸುತ್ತು-2                    ಬ್ರಾಂಡ್ ಹಾಜ್, ಯುಕೆ
ಜೂ-23-24        ಸುತ್ತು-3                     ಮಿಸಾನೊ, ಇಟಲಿ
ಜು-21-22          ಸುತ್ತು-4                     ಸ್ವಾ-ಫ್ರಾಂಕೋರ್ ಚಾಂಪ್ಸ್, ಬೆಲ್ಜಿಯಂ
ಸೆ-01-02           ಸುತ್ತು-5                     ಹಂಗರೊರಿಂಗ್, ಜರ್ಮನಿ
ಸೆ-15-16            ಸುತ್ತು-6                     ನರ್‍ಬರ್ಗಿಂಗ್, ಜರ್ಮನಿ

ಅಖಿಲ್ ರಬೀಂದ್ರ ಕುರಿತು :
2017 ರ ಬ್ರಿಟಿಷ್ ಜಿಟಿ ಚಾಂಪಿಯನ್‍ಶಿಪ್‍ನಲ್ಲಿ ಗರೇಜ್ 59 ತಂಡ ಪ್ರತಿನಿಧಿಸಲು ಒಪ್ಪಂದ. ಬೆಂಗಳೂರಿನಲ್ಲಿ ಜನಿಸಿದ ಅಖಿಲ್ 2014 ರಲ್ಲಿ ಐಎಫ್‍ಐಎ ಇನ್‍ಸ್ಟಿಟ್ಯೂಟ್ ಯಂಗ್ ಡ್ರೈವರ್ ಅಕಾಡೆಮಿಗೆ ಸದಸ್ಯರಾಗಿ ಸೇರ್ಪಡೆ. ಬ್ರಿಟಿಷ್ ಜಿಟಿ ಸರ್ಪೋಟಿಂಗ್ ಸೀರೀಸ್‍ನಲ್ಲಿ ಎರಡು ವರ್ಷ ಸತತ ಯಶಸ್ಸು. ಬಿಆರ್‍ಬಿಸಿ ಎಫ್-4 ಹಾಗೂ ಬ್ರಿಟಿಷ್ ಫಾರ್ಮುಲ 3 ಚಾಂಪಿಯನ್‍ಶಿಪ್‍ನಲ್ಲಿ ಭಾಗಿ.

14ನೇ ವಯಸ್ಸಿನಲ್ಲಿ ಗೋ-ಕಾರ್ಟಂಗ್ ಮೂಲಕ ರೇಸಿಂಗ್ ಪ್ರಾರಂಭಿಸಿದ ಅಖಿಲ್ ಫಾರ್ಮುಲ ಕಾರುಗಳ ಬಗ್ಗೆ ಹೆಚ್ಚು ಗಮನಹರಿಸಿದ್ದರು. ನಂತರ ಸ್ಪೋಟ್ರ್ಸ್‍ಕಾರು ಚಾಲನೆ ಆರಂಭಿಸಿದರು. ಉದ್ದೇಶ ವೃತ್ತಪರ ಜಿಟಿ ಚಾಲಕ ಆಗಬೇಕು ಎಂಬುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ