ಬೆಂಗಳೂರು, ಏ.5- ಕೃಷ್ಣನ ಭಕ್ತರೊಬ್ಬರನ್ನು ದುಷ್ಕರ್ಮಿಗಳು ಕಾಲು ಕಟ್ಟಿಹಾಕಿ ಕುತ್ತಿಗೆ ಬಿಗಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೆ.ಆರ್.ಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆತ್ತಲ್‍ನಗರದ 3ನೇ ಮುಖ್ಯರಸ್ತೆಯ ಟಿಜಿಆರ್ ಅಪಾರ್ಟ್‍ಮೆಂಟ್‍ನ ಮೊದಲ ಮಹಡಿಯಲ್ಲಿ ವಾಸವಾಗಿದ್ದ ಸಂಜಯ್‍ಸತೀಶ್(68) ಕೊಲೆಯಾದವರು. ಸಂಜಯ್‍ಸತೀಶ್ ಅವರು ಹರೆರಾಮ ಹರೆಕೃಷ್ಣನ ಭಕ್ತರಾಗಿದ್ದರು ಎಂದು ಕೆ.ಆರ್.ಪುರ ಪೆÇಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳು ನಾಲ್ಕೈದು ದಿನಗಳ ಹಿಂದೆಯೇ ಇವರ ಮನೆಗೆ ನುಗ್ಗಿ ಕಾಲು ಕಟ್ಟಿಹಾಕಿ ಕುತ್ತಿಗೆ ಬಿಗಿದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇವರ ಮನೆಯಿಂದ ವಾಸನೆ ಬರುತ್ತಿದ್ದದನ್ನು ಗಮನಿಸಿದ ನೆರೆಹೊರೆಯವರು ಅನುಮಾನಗೊಂಡು ಪೆÇಲೀಸರಿಗೆ ತಿಳಿಸಿದ್ದಾರೆ.
ಸುದ್ದಿ ತಿಳಿದ ಕೆ.ಆರ್.ಪುರ ಠಾಣೆ ಪೆÇಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಸಂಜಯ್‍ಸತೀಶ್ ಅವರ ಶವ ಪತ್ತೆಯಾಗಿದೆ.
ಯಾರು, ಯಾವ ಕಾರಣಕ್ಕಾಗಿ ಇವರನ್ನು ಕೊಲೆ ಮಾಡಿದ್ದಾರೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಈ ಬಗ್ಗೆ ಕೆ.ಆರ್.ಪುರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಶವವನ್ನು ಅಂಬೇಡ್ಕರ್ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.