ಬಿ.ಎನ್.ಆರ್ ಫಿಲಂಸ್ ಲಾಂಛನದಲ್ಲಿ ಬಾ.ನಾ.ರವಿ ಅವರು ನಿರ್ಮಿಸಿರುವ `ಮದುವೆ ದಿಬ್ಬಣ’ ಚಿತ್ರÀ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಎಸ್.ಉಮೇಶ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಚಂದ್ರು ಅವರ ಛಾಯಾಗ್ರಹಣವಿದೆ. ಎ.ಟಿ.ರವೀಶ್ ಸಂಗೀತ ನಿರ್ದೇಶನ, ಈಶ್ವರ್ ಸಂಕಲನ ಹಾಗೂ ಸ್ಟಾರ್ ನಾಗಿ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಹಂಸರಾಜ್ ಸಂಭಾಷಣೆ ಬರೆದಿದ್ದಾರೆ.
ಅಭಿಷೇಕ್, ಸೋನಾಲ್, ಶಿವರಾಜ್ ಕೆ.ಆರ್.ಪೇಟೆ, ಚಂದ್ರಕಲಾ ಮೋಹನ್, ವೀರಣ್ಣ, ಆಲಿಶಾ, ಕಾವ್ಯ, ಮಾಸ್ಟರ್ ಭೂಷಣ್, ಬೇಬಿ ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.