ಬೆಂಗಳೂರು, ಏ.3- ಪಿಇಎಸ್ ವಿಶ್ವವಿದ್ಯಾಲಯ ಸಂಸ್ಥಾಪನೆ ದಿನಾಚರಣೆ ಹಾಗೂ ಪೆÇ್ರ.ಸಿ.ಎನ್.ರಾವ್, ಪೆÇ್ರ.ಎಂ.ಆರ್.ಡಿ. ಪ್ರತಿಭಾ ವಿದ್ಯಾರ್ಥಿ ವೇತನ ಸಮಾರಂಭವು ನಾಳೆ ಸಂಜೆ ನಾಳೆ ಸಂಜೆ 4.30ಕ್ಕೆ ಪಿಇಎಸ್ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿವಿ ಸಂಸ್ಥಾಪಕ ಎಂ.ಆರ್.ದೊರೆಸ್ವಾಮಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿಶೇಷ ಆಹ್ವಾನಿತರಾಗಿ ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಭಾಗವಹಿಸಲಿದ್ದಾರೆ ಎಂದರು.
ಇದೇ ವೇಳೆ ವಿವಿ ಅಭಿವೃದ್ಧಿಗೆ ಸಹಕರಿಸಿದ ಉನ್ನತ ಶಿಕ್ಷಣ ಇಲಾಖೆಯ ಮಾಜಿ ಪ್ರಧಾನಕಾರ್ಯದರ್ಶಿ ಸಿದ್ದಯ್ಯ ಅವರನ್ನು ಗೌರವಿಸಲಾಗುವುದು. ಶೇ.20ರಷ್ಟು ವಿದ್ಯಾರ್ಥಿಗಳಿಗೆ ಸಿ.ಎನ್.ಆರ್. ಪ್ರತಿಭಾ ವೇತನ, ಪೆÇ್ರ. ಎಂ.ಆರ್.ಡಿ ಪ್ರತಿಭಾ ವಿದ್ಯಾರ್ಥಿ ವೇತನ ಹಾಗೂ ಶೇ.75ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಡಿಸ್ಟಂಕ್ಷನ್ ಅವಾರ್ಡ್ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
2015ರಿಂದಲೂ ಪೆÇ್ರ.ಸಿ.ಎನ್.ರಾವ್ ಪ್ರತಿಭಾ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಇದುವರೆಗೂ 11, 10,98,593 ರೂ.ವನ್ನು 590 ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.
ಈ ಬಾರಿ 173 ವಿದ್ಯಾರ್ಥಿಗಳಿಗೆ ಪೆÇ್ರ.ಸಿ.ಎನ್.ಆರ್.ರಾವ್ ವಿದ್ಯಾರ್ಥಿ ವೇತನ, 230 ವಿದ್ಯಾರ್ಥಿಗಳಿಗೆ ಪೆÇ್ರ.ಎಂ.ಡಿ.ಆರ್. ಪ್ರತಿಭಾ ವಿದ್ಯಾರ್ಥಿ ವೇತನ, 3708 ವಿದ್ಯಾರ್ಥಿಗಳಿಗೆ ಡಿಸ್ಟಂಕ್ಷನ್ ಅವಾರ್ಡ್ಗೆ ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.
ವಿವಿಯ ಉದ್ಯೋಗ ಅಧಿಕಾರಿ ಡಾ.ಶ್ರೀಧರ್, ಸಂಶೋಧನಾ ವಿಭಾಗದ ಮುಖ್ಯಸ್ಥ ಮೂರ್ತಿ ಸೇರಿದಂತೆ ಮತ್ತಿತರರಿದ್ದರು.