ಬೆಂಗಳೂರು, ಏ.3- ಕ್ಷುಲ್ಲಕ ಕಾರಣಕ್ಕೆ ಕಾರು ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ವಿಜಯನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಶ್ರೀಕಾಂತ್ (26), ಪ್ರದೀಪ್ದಾಸ್ (21), ವಿಜಯ್ಕುಮಾರ್ (23), ಕಿರಣ್ಕುಮಾರ್ (19) ಬಂಧಿತ ಆರೋಪಿಗಳಾಗಿದ್ದು, ಇವರಿಂದ ಕೃತ್ಯಕ್ಕೆ ಬಳಸಿದ್ದ ಡ್ರ್ಯಾಗರ್, ಸ್ಪ್ರೇ ಬಾಟಲ್ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರು ಚಾಲಕ ವೃತ್ತಿ ಮಾಡುವ ಅಕ್ಬರ್ ಪಾಷ (20) ಎಂಬುವರು ಮಾ.26ರಂದು ಸಂಜೆ 7.30ರ ಸಮಯದಲ್ಲಿ ದಾಸರಹಳ್ಳಿ ಸ್ಕೇರ್ಪ್ಲೇಟ್ ಹೊಟೇಲ್ ಬಳಿ ರಸ್ತೆ ಬದಿ ನಿಂತಿದ್ದಾಗ ಮೂರ್ನಾಲ್ಕು ಮಂದಿ ವಾಹನಗಳಲ್ಲಿ ಬಂದು ಏಕಾಏಕಿ ಕ್ಷುಲ್ಲಕ ವಿಚಾರಕ್ಕಾಗಿ ಇವರ ಜತೆ ಜಗಳ ತೆಗೆದು ಚಾಕು ಮತ್ತು ತಲವಾರ್ನಿಂದ ಎಡಬದಿಯ ತೊಡೆ ಹಾಗೂ ಸೊಂಟದ ಭಾಗಕ್ಕೆ ಹಾಗೂ ಎಡಗೈಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ತಕ್ಷಣ ದಾರಿಹೋಕರು ಗಾಯಾಳು ಅಕ್ಬರ್ ಪಾಷನನ್ನು ಬಸವೇಶ್ವರನಗರದ ಪುಣ್ಯ ಆಸ್ಪತ್ರೆಗೆ ದಾಖಲಿಸಿದ್ದರು. ಅಕ್ಬರ್ ಪಾಷ ನಡೆದ ಘಟನೆಯನ್ನು ತಂದೆ ಮೆಹಬೂಬ್ ಪಾಷ ಅವರಿಗೆ ತಿಳಿಸಿದ್ದರು. ಮೆಹಬೂಬ್ ಪಾಷ ಅವರು ಈ ಬಗ್ಗೆ ವಿಜಯನಗರ ಪೆÇಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಪೆÇಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಶ್ಚಿಮ ವಿಭಾಗದ ಉಪಪೆÇಲೀಸ್ ಆಯುಕ್ತ ರವಿ ಡಿ.ಚನ್ನಣ್ಣನವರ್ ಮಾರ್ಗದರ್ಶನದಲ್ಲಿ ಸಹಾಯಕ ಪೆÇಲೀಸ್ ಆಯುಕ್ತ ಪರಮೇಶ್ವರ್ ಹೆಗಡೆ ಹಾಗೂ ವಿಜಯನಗರ ಠಾಣೆ ಇನ್ಸ್ಪೆಕ್ಟರ್ ನಾಗೇಶ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.