![kedarnath chopper](http://kannada.vartamitra.com/wp-content/uploads/2018/04/kedarnath-chopper-678x381.jpg)
ಕೇದಾರ ನಾಥ: ಇಲ್ಲಿನ ದೇವಾಲಯದ ಬಳಿ ಮಂಗಳವಾರ ಬೆಳಗ್ಗೆ ಭಾರತೀಯ ವಾಯುಪಡೆಯ ಕಾರ್ಗೋ ವಿಮಾನವೊಂದು ಪತನಗೊಂಡಿದ್ದು, ಆರು ಸಿಬ್ಬಂದಿ ಗಾಯಗೊಂಡಿದ್ದಾರೆ.
ಎಂಐ 17 ಹೆಲಿಕ್ಯಾಪ್ಟರ್ ಸೈನಿಕರಿಗೆ ಸಲಕರಣೆಗಳನ್ನು ಸಾಗಿಸುತ್ತಿತ್ತು, ಲ್ಯಾಂಡಿಂಗ್ ವೇಳೆ ಕಬ್ಬಿಣದ ಗೇಟ್‌ಗೆ ಗುದ್ದಿ ಮಗುಚಿ ಬಿದ್ದಿದೆ ಎಂದು ತಿಳಿದುಬಂದಿದೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ರಕ್ಷಣಾಕಾರ್ಯ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.