ತಪ್ಪಿಸಿಕೊಳ್ಳುವ ಸಲುವಾಗಿ ಪಕ್ಕದ ಕಟ್ಟಡಕ್ಕೆ ಜಿಗಿದಾಗ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತ:

ಬೆಂಗಳೂರು, ಏ.2-ಪಿಜಿ ಕಟ್ಟಡ ಬಳಿ ಬಂದಿದ್ದ ವ್ಯಕ್ತಿಯನ್ನು ಕಂಡ ಯುವತಿಯರು ಕಳ್ಳ-ಕಳ್ಳನೆಂದು ಕೂಗಿಕೊಂಡಾಗ ಭಯದಲ್ಲಿ ಪಕ್ಕದ ಕಟ್ಟಡಕ್ಕೆ ಜಿಗಿದ ವ್ಯಕ್ತಿ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳ್ಳಂದೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವ್ಯಕ್ತಿ ಸುಮಾರು 30ರಿಂದ 35 ವಯಸ್ಸಿನವನಂತೆ ಕಾಣುತ್ತಿದ್ದು, ಈತನ ಹೆಸರು, ಊರು ತಿಳಿದು ಬಂದಿಲ್ಲ. ಸರ್ಜಾಪುರ ರಸ್ತೆಯ ಕೈಗೊಂಡನಹಳ್ಳಿಯಲ್ಲಿ ಲೇಡಿಸ್ ಪಿಜಿ ಇದೆ. ಇಂದು ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಈ ವ್ಯಕ್ತಿ ಪಕ್ಕದ ಕಟ್ಟಡದ ಮೂಲಕ ಪಿಜಿ ಕಟ್ಟಡಕ್ಕೆ ಬಂದಿದ್ದಾನೆ. ಈ ಸಂದರ್ಭದಲ್ಲಿ ಎಚ್ಚರಗೊಂಡ ಯುವತಿಯರು ಈತನನ್ನು ಕಂಡು ಕಳ್ಳ- ಕಳ್ಳ ಎಂದು ಕೂಗಿಕೊಂಡಿದ್ದಾರೆ.
ಇದರಿಂದ ಗಾಬರಿಗೊಂಡ ಈತ ತಪ್ಪಿಸಿಕೊಳ್ಳುವ ಸಲುವಾಗಿ ಪಕ್ಕದ ಕಟ್ಟಡಕ್ಕೆ ಜಿಗಿದಾಗ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ಬೆಳ್ಳಂದೂರು ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಶವವನ್ನು ಸೆಂಟ್‍ಜಾನ್ಸ್ ಆಸ್ಪತ್ರೆಗೆ ಸಾಗಿಸಿ ಪ್ರಕರಣ ದಾಖಲಿಸಿಕೊಕಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ