ನವದೆಹಲಿ,ಏ.2- ಸುಪ್ರೀಂಕೋರ್ಟ್ ಸೂಚಿಸಿರುವ ಪ್ರಕಾರ ಎಸ್ಸಿ-ಎಸ್ಟಿ ಕಾಯ್ದೆ ತಿದ್ದುಪಡಿಗಳನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಭಾರತ್ ಬಂದ್ ಪ್ರಯುಕ್ತ ಆಗ್ರಾದಲ್ಲಿ ಇಂದು ಪ್ರತಿಭಟನಕಾರರು ಕೆಲವು ರಾಜ್ಯಗಳಲ್ಲಿ ರೈಲು ತಡೆದು, ಪ್ರತಿಭಟನೆ ನಡೆಸಲಾಗಿದೆ.
ಪಂಜಾಬ್, ಬಿಹಾರ ಮತ್ತು ಒಡಿಶಾದಲ್ಲಿ ಪ್ರತಿಭಟನಕಾರರು ರೈಲುಗಳನ್ನು ತಡೆದಿರುವ ಬಗ್ಗೆ ವರದಿಯಾಗಿದ್ದು, ಹಲವಾರು ಅಂಗಡಿಗಳನ್ನು ಹಾನಿಗೊಳಿಸಲಾಗಿದೆ.
ಎಸ್ಸಿ/ಎಸ್ಟಿ ಕಾಯ್ದೆ ಪ್ರಸ್ತಾವಿತ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಅನೇಕ ದಲಿತ ಸಮೂಹಗಳು ಭಾರತ್ ಬಂದ್‍ಗೆ ಕರೆ ನೀಡಿದ್ದು, ಆಗ್ರಾ ಮಾತ್ರವಲ್ಲದೆ ಪಂಜಾಬ್‍ನ ಲೂಧಿಯಾನ ಮತ್ತು ಝಿರಾಕ್ಪುರ ಹಾಗೂ ಇತರ ಅನೇಕ ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿರುವ ವರದಿಯಾಗಿದೆ.
ದೇಶದ ವಿವಿಧ ಕಡೆಗಳಲ್ಲಿ ರೈಲು ಸೇವೆ ಬಾಧಿತವಾಗಿದೆ. ಪ್ರತಿಭಟನಕಾರರು ರೈಲು ಹಳಿಗಳಲ್ಲಿ ಜಮಾಯಿಸಿ ರೈಲುಗಳ ಸಂಚಾರವನ್ನು ತಡೆದಿದ್ದಾರೆ. ಭಾರತ್ ಬಂದ್ ಭಾಗವಾಗಿ ಕೆಲವು ರಾಜ್ಯಗಳಲ್ಲಿ ಈ ಹಿಂಸಾತ್ಮಕ ಪ್ರತಿಭಟನೆಗಳ ಪರಿಣಾಮವಾಗಿ ಮಾರಕಟ್ಟೆಗಳು ಬಂದ್ ಆಗಿವೆ. ಅಂಗಡಿ ಮುಂಗಟ್ಟುಗಳು ಮುಚ್ಚಿವೆ.
ಭಾರತ್ ಬಂದ್ ಅಂಗವಾಗಿ ಬಿಹಾರದ ಅರ್ಹಾ ದಲ್ಲಿ ಸಿಪಿಎಂ ಲಿಬರೇಶನ್, ಅಥವಾ ಸಿಪಿಐ (ಎಂಎಲ್) ಸಂಘಟನೆಗಳ ಪ್ರತಿಭಟಕಾರರು ರೈಲುಗಳನ್ನು ತಡೆದಿರುವುದಾಗಿ ತಿಳಿದುಬಂದಿದೆ.