ಬೆಂಗಳೂರು, ಏ.1- ಹೊರ ರಾಜ್ಯದಿಂದ ಯುವತಿಯರನ್ನು ಮಾನವ ಸಾಗಣೆ ಮಾಡಿಕೊಂಡು ಬಂದು ಹೆಚ್ಚಿನ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ ಇಬ್ಬರನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ.
ಚೋಳನಾಯಕನಹಳ್ಳಿಯ ಸಿದ್ಧಾರ್ಥ ಸೇನ (20) ಮತ್ತು ದೊಡ್ಡಬಳ್ಳಾಪುರದ ಶ್ರೀಧರ (35) ಬಂಧಿತ ಆರೋಪಿಗಳಾಗಿದ್ದು, ಸುರೇಶ ಮತ್ತು ಹೆಬ್ಬಾಳದ ಮಂಜುನಾಥ ತಲೆಮರೆಸಿಕೊಂಡಿದ್ದು, ಇವರಿಬ್ಬರ ಬಂಧನಕ್ಕೆ ತನಿಖೆ ಮುಂದುವರಿದಿದೆ.
ಹೊರರಾಜ್ಯದಿಂದ ಯುವತಿಯರನ್ನು ಮಾನವ ಸಾಗಣೆ ಮಾಡಿಕೊಂಡು ಬಂದು ಹೆಚ್ಚಿನ ಹಣದ ಆಮಿಷವೊಡ್ಡಿ ಆರ್ಟಿ ನಗರ ಪೆÇೀಸ್ಟ್, ಕನಕನಗರ, 14ನೆ ಕ್ರಾಸ್ನ ಮನೆಯೊಂದರಲ್ಲಿಟ್ಟು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.
ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೆÇಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮನೆ ಮೇಲೆ ದಾಳಿ ಮಾಡಿ ಹೊರರಾಜ್ಯದ ಯುವತಿಯರನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರಿಂದ 1 ಸಾವಿರ ಹಣ, 3 ಮೊಬೈಲ್ ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ದೇವರಜೀವನಹಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.