ಶ್ರೀನಗರ, ಏ.1- ಕಾಶ್ಮೀರ ಕಣಿವೆಯ ಸೊಪಿಯಾನ್ನ ದಾರ್ಗದ್ ಮತ್ತು ಕಾಚ್ದೋರಾದಲ್ಲಿ ಮಧ್ಯರಾತ್ರಿ ಎನ್ಕೌಂಟರ್ ನಡೆದಿದ್ದು ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ದಾರ್ಗದ್ ಮತ್ತು ಕಾಚ್ದೋರಾಗಳಲ್ಲಿ ಉಗ್ರರು ಅಡಗಿರುವ ಮಾಹಿತಿ ಪಡೆದ ಪೆÇಲೀಸ್ ಮತ್ತು ಸೇನಾಪಡೆಗಳು ಏಕಕಾಲದಲ್ಲಿ ಎರಡೂ ಕಡೆಯೂ ದಾಳಿ ನಡೆಸಿದ್ದಾರೆ. ಕಾಚ್ದೋರಾದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಸೈನಿಕರು ಹಾಗೂ ದಾರ್ಗಾದ್ನಲ್ಲಿ ಒಬ್ಬ ಯೋಧನಿಗೆ ಗಂಭೀರವಾಗಿ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿದೆ.
ಉಗ್ರರು ಈ ಎರಡು ಪ್ರದೇಶಗಳ ನಿವಾಸಗಳಲ್ಲಿ ಆಶ್ರಯಪಡೆದಿದ್ದು, ಕಳೆದ ರಾತ್ರಿ ನಡೆದ ದಾಳಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ, ಒಬ್ಬನನ್ನು ಬಂಧಿಸಲಾಗಿದೆ. ಇನ್ನು ಅನೇಕ ಉಗ್ರರು ದಾರ್ಗದ್ ಮತ್ತು ಕಾಚ್ದೋರಾಗಳ ಮನೆಗಳಲ್ಲಿ ಅಡಗಿದ್ದಾರೆ ಎಂದು ಸೇನಾ ಮೂಲಗಳು ಶಂಕಿಸಿವೆ.