ಹನುಮಾನ್ ಜಯಂತಿ ಪ್ರಯುಕ್ತ: 3751 ಕೆ.ಜಿ.ತೂಕದ ದೊಡ್ಡ ಲಾಡು

ಸೂರತ್, ಏ.1-ಶ್ರೀರಾಮನ ಬಂಟ, ಪವನಪುತ್ರ ಹನುಮಾನ್ ಜಯಂತಿ ಪ್ರಯುಕ್ತ ಗುಜರಾತ್‍ನ ಸೂರತ್‍ನ ದೇವಾಲಯದಲ್ಲಿ 3751 ಕೆ.ಜಿ.ತೂಕದ ದೊಡ್ಡ ಲಾಡುವೊಂದನ್ನು ತಯಾರಿಸಿ ಭಕ್ತರಿಗೆ ಪ್ರಸಾದವಾಗಿ ವಿನಿಯೋಗಿಸಲಾಗಿದೆ. ಸೂರತ್‍ನ ಪಲ್ ಪ್ರದೇಶದಲ್ಲಿರುವ ಅಟಲ್ ಆಶ್ರಮದಲ್ಲಿ ನಿರ್ಮಾಣವಾದ ಈ ಬೃಹತ್ ಲಾಡು ದೇಶದ ಗಮನಸೆಳೆದಿದೆ. ಆಶ್ರಮದ ಪ್ರಧಾನ ಅರ್ಚಕ ಬಟುಕ್‍ಗಿರಿ ಮಹಾರಾಜ್ ನೇತೃತ್ವದಲ್ಲಿ ಈ ಲಾಡು ನಿರ್ಮಾಣವಾಗಿದೆ. ಹನುಮಾನ್‍ಗೆ ಇದನ್ನು ಸಾಂಕೇತಿಕವಾಗಿ ನೈವೇದ್ಯ ಮಾಡಿದ ನಂತರ ಸಹಸ್ರಾರು ಭಕ್ತರಿಗೆ ಪ್ರಸಾದವಾಗಿ ವಿನಿಯೋಗಿಸಲಾಯಿತು. ಪುರಾಣ ಪ್ರಸಿದ್ಧಿ ಪಡೆದಿರುವ ಈ ದೇವಾಲಯಕ್ಕೆ ಹನುಮಂತ ಜಯಂತಿ ಪ್ರಯುಕ್ತ ಅಸಂಖ್ಯಾತ ಭಕ್ತರು ಭೇಟಿ ನೀಡಿದ ಮಾರುತಿ ದರುಶನ ಪಡೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ